ಕರ್ನಾಟಕ

karnataka

ETV Bharat / business

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ತೈಲ ದರ:  ಈಗ ಯಥಾವತ್ತಾಗಿ ಉಳಿದ ಪೆಟ್ರೋಲ್ ಡೀಸೆಲ್ ಬೆಲೆ

ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 85.20 ರೂ.ಯಲ್ಲಿ ಮಾರಾಟವಾಗುತ್ತಿದ್ದರೆ, ಡೀಸೆಲ್ 75.38 ರೂ. ಕೊಟ್ಟು ಖರೀದಿಸುತ್ತಿದ್ದಾರೆ. ದೇಶಾದ್ಯಂತ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಯಥಾವತ್ತಾಗಿವೆ.

Fuel
Fuel

By

Published : Jan 20, 2021, 1:08 PM IST

ನವದೆಹಲಿ:ಕಳೆದ ಕೆಲವು ದಿನಗಳಿಂದ ಆಟೋ ಇಂಧನಗಳ ಬೆಲೆ ಸ್ಥಿರವಾಗಿ ಏರಿದ ನಂತರ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ತಾತ್ಕಾಲಿಕ ಪರಿಹಾರ ನೀಡಲು ವಿರಾಮದ ಮೊರೆ ಹೋಗಿವೆ. ಅವುಗಳ ಈ ನಿರ್ಧಾರ ನಂತರ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೇ ಉಳಿದಿದೆ.

ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 85.20 ರೂ.ಯಲ್ಲಿ ಮಾರಾಟವಾಗುತ್ತಿದ್ದರೆ, ಡೀಸೆಲ್ 75.38 ರೂ. ಕೊಟ್ಟು ಖರೀದಿಸುತ್ತಿದ್ದಾರೆ. ದೇಶಾದ್ಯಂತ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಯಥಾವತ್ತಾಗಿವೆ.

ಇದನ್ನೂ ಓದಿ: ನೀತಿ ಆಯೋಗದ ಇನ್ನೋವೇಷನ್ ಸೂಚ್ಯಂಕ: ಭಾರತದಲ್ಲಿ ಸತತ 2ನೇ ವರ್ಷವೂ ಕರ್ನಾಟಕಕ್ಕೆ ನಂ.1 ಸ್ಥಾನ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸೋಮವಾರ ಮತ್ತು ಮಂಗಳವಾರ ತಲಾ 25 ಪೈಸೆಗಳಷ್ಟು ತೀವ್ರವಾಗಿ ಏರಿವೆ. ಒಎಂಸಿಗಳು ಗ್ರಾಹಕರಿಗೆ ಆಗಾಗ್ಗೆ ಬೆಲೆ ಏರಿಕೆಯಿಂದ ಪರಿಹಾರ ನೀಡಲು ನಿರ್ಧರಿಸಿವೆ.

ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆ ಜನವರಿಯಲ್ಲಿ ಕ್ರಮವಾಗಿ 1.49 ಮತ್ತು 1.51 ರೂ.ಗಳಷ್ಟು ಹೆಚ್ಚಾಗಿದೆ. ಒಎಂಸಿಗಳು ಹಿಂದಿನ ದೀರ್ಘಾವಧಿಯ ವಿರಾಮಕ್ಕೆ ಬ್ರೇಕ್​ ಹಾಕಲು ನಿರ್ಧರಿಸಿದ್ದು, ಈ ವರ್ಷ ಜನವರಿ 6ರಂದು ಚಿಲ್ಲರೆ ದರ ಮೊದಲ ಬಾರಿಗೆ ಹೆಚ್ಚಳವಾಯಿತು. ಅಂದಿನಿಂದ ಐದು ಬಾರಿ ದರ ಏರಿಕೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿನ ಪಂಪ್ ಬೆಲೆಯಲ್ಲಿ ಕಳೆದ ಎರಡು ದಿನಗಳ ಹೆಚ್ಚಳವು ಎಲ್ಲಾ ಪ್ರಮುಖ ಮೆಟ್ರೋ ನಗರಗಳು ಮತ್ತು ಇತರ ಪಟ್ಟಣಗಳಲ್ಲಿ ಬೆಲೆಗಳು ದಾಖಲೆಯ ಮಟ್ಟಕ್ಕೆ ಕೊಂಡೊಯ್ದಿದೆ.

ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ತೈಲ ಕಂಪನಿಗಳ ಅಧಿಕಾರಿಗಳು ತಿಳಿಸಿದ್ದಾರೆ. ಆಟೋ ಇಂಧನ ಮಾರಾಟದಲ್ಲಿ ಒಎಂಸಿಗಳು ನಷ್ಟವಾಗದಂತೆ ತಡೆಯಲು ಜಾಗತಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಚಿಲ್ಲರೆ ಬೆಲೆಗಳನ್ನು ಸಮತೋಲನಗೊಳಿಸಿಕೊಳ್ಳಲಿವೆ.

ABOUT THE AUTHOR

...view details