ನವದೆಹಲಿ:ದಿನೇ ದಿನೆ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಕ್ರಮವಾಗಿ ಲೀಟರ್‌ಗೆ 93.59 ಮತ್ತು 83.85 ರೂ. ತಲುಪಿದೆ.
ಇಂಧನ ಬೆಲೆ ಏರಿಕೆಯ ಬರೆ: ವಿವಿಧ ನಗರಗಳಲ್ಲಿ ಪೆಟ್ರೋಲ್ - ಡೀಸೆಲ್ ದರ ಎಷ್ಟಿದೆ ಗೊತ್ತಾ? - ಪೆಟ್ರೋಲ್ ಬೆಲೆ ಏರಿಕೆ
ಇಂಧನ ಬೆಲೆ ಗಗನಕ್ಕೆ ಏರುತ್ತಿದ್ದು, ಭೋಪಾಲ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಕ್ರಮವಾಗಿ ಲೀಟರ್‌ಗೆ 93.59 ಮತ್ತು 83.85 ರೂಪಾಯಿ ತಲುಪಿದೆ.
ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 85.70 ಮತ್ತು 75.88 ರೂ. ತಲುಪಿದೆ. ಮುಂಬೈನಲ್ಲಿ 92.28 ಮತ್ತು 82.66 ರೂ, ಚೆನ್ನೈನಲ್ಲಿ 88.29 ಮತ್ತು 81.14 ರೂ ಮತ್ತು ಕೋಲ್ಕತ್ತಾದಲ್ಲಿ 87.11 ಮತ್ತು 79.48 ರೂಪಾಯಿ ಆಗಿದೆ.
ಸಾಂಕ್ರಾಮಿಕ ರೋಗದಿಂದಾಗಿ ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ ಉತ್ಪಾದನೆ ಕಡಿಮೆಯಾದ ಕಾರಣ ಇಂಧನ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದರು. "ನಮ್ಮ ಮುಖ್ಯ ಸವಾಲು, ನಮ್ಮ ಅವಶ್ಯಕತೆಯ ಶೇಕಡಾ 80 ರಷ್ಟು ಕಚ್ಚಾ ತೈಲವನ್ನು ನಾವು ಆಮದು ಮಾಡಿಕೊಳ್ಳಬೇಕು. ಕೊರೊನಾ ವೈರಸ್ ಕಾರಣದಿಂದಾಗಿ, ತೈಲ ಉತ್ಪಾದಿಸುವ ಅನೇಕ ದೇಶಗಳು ಉತ್ಪಾದನೆಯನ್ನು ನಿಲ್ಲಿಸಿವೆ ಅಥವಾ ಕಡಿಮೆಗೊಳಿಸಿವೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಸಮತೋಲನದಿಂದಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ' ಎಂದಿದ್ದರು.