ಕರ್ನಾಟಕ

karnataka

ETV Bharat / business

ದೇಶಾದ್ಯಂತ ಎನ್​ಡಿಎಗೆ ಮುನ್ನಡೆ... 40 ಸಾವಿರದ ಗಡಿ ದಾಟಿ ಗುಟುರು ಹಾಕಿದ ಷೇರುಪೇಟೆ

ಮೊನ್ನೆ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಳ್ಳುತ್ತಿದ್ದಂತೆ 1400 ಅಂಶ ದಾಖಲಿಸಿ ಇತಿಹಾಸ ಬರೆದಿದ್ದ ಮುಂಬೈ ಷೇರುಪೇಟೆ ಇಂದು ಎನ್​ಡಿಎ ಅಧಿಕಾರ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಭಾರಿ ಮುನ್ನಡೆ ಪಡೆಯಿತು.

ಷೇರುಪೇಟೆ

By

Published : May 23, 2019, 9:49 AM IST

Updated : May 23, 2019, 10:43 AM IST

ಮುಂಬೈ: ಲೋಕಸಮರದ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಷೇರುಪೇಟೆಯಲ್ಲಿ ಭಾರಿ ಏರಿಕೆ ದಾಖಲಾಗಿದೆ.

ಮೊನ್ನೆ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಳ್ಳುತ್ತಿದ್ದಂತೆ 1400 ಅಂಶ ದಾಖಲಿಸಿ ಇತಿಹಾಸ ಬರೆದಿದ್ದ ಮುಂಬೈ ಷೇರುಪೇಟೆ ಇಂದು ಎನ್​ಡಿಎ ಅಧಿಕಾರ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಭಾರಿ ಮುನ್ನಡೆ ಪಡೆಯಿತು.

ಹತ್ತು ಗಂಟೆಯ ಒಳಗೆ ಸುಮಾರು 780 ಅಂಕಗಳಿಗಿಂತ ಹೆಚ್ಚು ಜಿಗಿತ ಕಂಡ ಸೆನ್ಸಕ್ಸ್​ ಹೂಡಿಕೆದಾರರಲ್ಲಿ ಭಾರಿ ಲಾಭ ಮಾಡಿಕೊಟ್ಟಿತ್ತು. ಹನ್ನೊಂದರ ವೇಳೆಗೆ 921ಗಳಷ್ಟು ಏರಿಕೆ ಕಂಡ ಸೆನ್ಸೆಕ್ಸ್ ಹೂಡಿಕೆದಾರರ ಭಾರಿ ಹುಮ್ಮಸ್ಸು ತಂದಿದೆ. ಮೋದಿ ಸರ್ಕಾರ ಅಧಿಕಾರದತ್ತ ಎಂಬ ಸುದ್ದಿಕೇಳಿ ಷೇರುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.

ಈ ಮೂಲಕ ಷೇರುಪೇಟೆ ಸಂವ್ಯೇದಿ ಸೂಚ್ಯಂಕ 40 ಸಾವಿರದ ಗಡಿ ದಾಟಿ ಮುನ್ನುಗ್ಗುತ್ತಿದೆ. ಇನ್ನು ನಿಫ್ಟಿ ಸಹ 200 ಅಂಕಗಳಿಗಿಂತ ಮೇಲೇರಿತ್ತು. ಒಟ್ಟಿನಲ್ಲಿ ಷೇರುಪೇಟೆ ಸದ್ಯ ಹಬ್ಬದ ವಾತಾವರಣದಲ್ಲಿದೆ. ಮಧ್ಯಾಹ್ನದ ಮೇಲೆ ಫಲಿತಾಂಶದ ಆಧಾರದ ಮೇಲೆ ಪೇಟೆ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೋ ಕಾದು ನೋಡಬೇಕಿದೆ.

Last Updated : May 23, 2019, 10:43 AM IST

For All Latest Updates

TAGGED:

ABOUT THE AUTHOR

...view details