ನವದೆಹಲಿ: ಭಾರತೀಯ ಸಂಚಾರಿ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಗ್ರಾಹಕರಿಗಾಗಿ ಎರಡು ಹೊಸ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಪರಿಚಯಿಸಿದೆ.
BSNLನಿಂದ ನ್ಯೂ ಪ್ಲಾನ್.. ಡೇಟಾ, ಕಾಲ್ ದರದಲ್ಲಿ ಇಳಿಕೆ!
ಬಿಎಸ್ಎನ್ಎಲ್ ಆರು ತಿಂಗಳ ಅವಧಿಯ ಎರಡು ಪ್ಯಾಕೇಜ್ ಪರಿಚಯಿಸಿದೆ. ₹299 ಮತ್ತು ₹ 491ರಿಂದ ಅವು ಆರಂಭವಾಗಲಿವೆ. ಈ ಯೋಜನೆಗಳಲ್ಲಿ ಗ್ರಾಹಕರು ಅನಿಯಮಿತ ಸೌಲಭ್ಯಗಳನ್ನೂ ಸಹ ಪಡೆಯಬಹುದಾಗಿದೆ. 20 ಎಂಬಿಪಿಎಸ್ ವೇಗದ ಇಂಟರ್ನೆಟ್ ಸಿಗಲಿದೆ. ಬಿಎಸ್ಎನ್ಎಲ್ನ ಲ್ಯಾಂಡ್ಲೈನ್ ಮುಖೇನ ಯಾವುದೇ ನೆಟ್ವರ್ಕ್ಗಳಿಗೆ ಅನಿಯಮಿತ ಕರೆಗಳನ್ನು ಸಹ ಮಾಡಬಹುದು.
ಇದು ಆರು ತಿಂಗಳ ಅವಧಿಯ ಪ್ಯಾಕೇಜ್. ₹299 ಮತ್ತು ₹491ರಿಂದ ಈ ಪ್ಯಾಕೇಜ್ಗಳು ಆರಂಭವಾಗಲಿವೆ. ಈ ಯೋಜನೆಗಳಲ್ಲಿ ಗ್ರಾಹಕರು ಅನಿಯಮಿತ ಸೌಲಭ್ಯಗಳನ್ನ ಸಹ ಪಡೆಯಬಹುದಾಗಿದೆ. 20 ಎಂಬಿಪಿಎಸ್ ವೇಗದ ಇಂಟರ್ನೆಟ್ ಸಿಗಲಿದೆ. ಬಿಎಸ್ಎನ್ಎಲ್ನ ಲ್ಯಾಂಡ್ಲೈನ್ ಮುಖೇನ ಯಾವುದೇ ನೆಟ್ವರ್ಕ್ಗಳಿಗೆ ಅನಿಯಮಿತ ಕರೆಗಳನ್ನು ಸಹ ಮಾಡಬಹುದು.
₹299 ಯೋಜನೆಯಲ್ಲಿ 20 ಎಂಬಿಪಿಎಸ್ ವೇಗದ 50 ಜಿಬಿ ಡಾಟಾ ಹಾಗೂ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ನಿಂದ ಅನಿಯಮಿತ ಕರೆಗಳ ಸೌಲಭ್ಯ ನೀಡಲಾಗುತ್ತಿದೆ. ₹491 ಬ್ರಾಡ್ ಬ್ಯಾಂಡ್ ಯೋಜನೆಯಲ್ಲಿ 120 ಜಿಬಿ ಎಫ್ಯುಪಿ ಡಾಟಾ ಸಿಗಲಿದೆ ಹಾಗೂ ಅನಿಯಮಿತ ಕರೆ ಸೌಲಭ್ಯ ಲಭಿಸಲಿದೆ. 6 ತಿಂಗಳ ನಂತರ ಬಿಎಸ್ಎನ್ಎಲ್ ತನ್ನ ₹491 ಯೋಜನೆಯು 3ಜಿಬಿ ಸಿಯುಎಲ್ ಬ್ರಾಡ್ ಬ್ಯಾಂಡ್ ಯೋಜನೆಗೆ ವರ್ಗಾವಣೆಗೊಳ್ಳಲಿದೆ.