ಬೆಂಗಳೂರು: ಬ್ರಿಟಿಷ್ ಏರ್ವೇಸ್ ಸಂಸ್ಥೆಯು ಶೀಘ್ರದಲ್ಲಿ ಬೆಂಗಳೂರು-ಲಂಡನ್ ನಡುವೆ ನೇರವಾಗಿ ಏರ್ಬಸ್- 350 ವಿಮಾನ ಹಾರಾಟ ಸೇವೆ ಆರಂಭಿಸಲಾಗುವುದು ಎಂದು ಘೋಷಿಸಿದೆ.
ಎರ್ಬಸ್- 350 ವಿಮಾನ ಸೇವೆ ಪಡೆಯುತ್ತಿರುವ ವಿಶ್ವದ ನಾಲ್ಕನೇ ಹಾಗೂ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಐಷರಾಮಿ ಸೌಲಭ್ಯದಡಿ 275 ಆಸನಗಳನ್ನು ಹೊಂದಿರುವ ಎ-350 ವಿಮಾನಯಾನ ಸೇವೆ ಪಡೆಯುತ್ತಿರುವ ಜಾಗತಿಕ ಮೂರು ನಗರಗಳಾದ ದಕ್ಷಿಣ ಆಫ್ರಿಕಾದ ಕೇಪ್ಟೌನ್, ಆರಿಜೋನಾದ ಫೀನಿಕ್ಸ್ ಮತ್ತು ಅಮೆರಿಕಾದ ಲಾಸ್ ವೆಗಾಸ್ ಬಳಿಕ ಬೆಂಗಳೂರು ಸೇರ್ಪಡೆ ಆಗಲಿದೆ.
ಬೋಯಿಂಗ್ 777 ಮತ್ತು ಬೋಯಿಂಗ್ 737 ವಿಮಾನಗಳು ನಿತ್ಯ ಬೆಂಗಳೂರು-ಲಂಡನ್ ಮಾರ್ಗವಾಗಿ ಹೀಥ್ರೊ ವಿಮಾನ ನಿಲ್ದಾಣ ಮೂಲಕ ನೇರ ಹಾರಾಟ ಸೇವೆ ಒದಗಿಸುತ್ತಿವೆ. ಈ ವರ್ಷ್ಯಾಂತದ ಚಳಿಗಾಲ ವೇಳಾಪಟ್ಟಿಯಲ್ಲಿ ಬೆಂಗಳೂರು-ಲಂಡನ್ ಮಾರ್ಗವಾಗಿ ಎ-350 ವಿಮಾನ ಹಾರಾಟ ನಡೆಸಲಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.