ನವದೆಹಲಿ:2022ರ ಮಧ್ಯಂತರದ ನಂತರ ಭಾರತದಲ್ಲಿ ವಿಮಾನಯಾನ ಸಹಜ ಸ್ಥಿತಿಗೆ ಮರಳಲಿದೆ ಎಂದು ವಿಮಾನ ತಯಾರಕ ಕಂಪನಿ ಬೋಯಿಂಗ್ ಹೇಳಿದೆ.
2022ರಲ್ಲಿ ಭಾರತ ವಿಮಾನಯಾನ ಚೇತರಿಸಿಕೊಳ್ಳಲಿದೆ: ಬೋಯಿಂಗ್ - ವಿಮಾನಯಾನ ವಲಯ
ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಎಲ್ಲ ವಲಯಗಳು ತತ್ತರಿಸಿ ಹೋಗಿದ್ದು, ಇದರಿಂದ ವಿಮಾನಯಾನ ವಲಯ ಕೂಡ ಆರ್ಥಿಕ ನಷ್ಟ ಅನುಭವಿಸಿದೆ. ಇದೇ ವಿಚಾರವಾಗಿ ಇದೀಗ ಬೊಯಿಂಗ್ ಕಂಪನಿ ಮಾತನಾಡಿದೆ.
ಇನ್ನು ಕೊರೊನಾ ಪೂರ್ವದಲ್ಲಿದ್ದ ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆ 2030ರ ವೇಳೆಗೆ ದ್ವಿಗುಣಗೊಳ್ಳಲಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ. ಬೋಯಿಂಗ್ನ ಪ್ರಾದೇಶಿಕ ಮಾರ್ಕೆಟಿಂಗ್ ಮ್ಯಾನೇಜಿಂಗ್ ಡೈರೆಕ್ಟರ್ ಡೇವಿಡ್ ಶಲ್ಟ್ , ಕೋವಿಡ್ನಿಂದಾಗಿ ವಿಮಾನಯಾನಕ್ಕೆ ಹೊಡೆತ ಬಿದ್ದಿತ್ತು. ಆದರೆ, 2022ರ ಮಧ್ಯಂತರದಲ್ಲಿ ಸಹಜ ಸ್ಥಿತಿಗೆ ಮರಳಲಿದೆ. ಅಷ್ಟೇ ಅಲ್ಲ 2030ಕ್ಕೆ ಅದು ದ್ವಿಗುಣಗೊಳ್ಳಲಿದೆ ಎಂದರು.
2040ರ ವೇಳೆ ಬೋಯಿಂಗ್ ಭಾರತಕ್ಕೆ ಸುಮಾರು 2,230 ಹೊಸ ಏರ್ಕ್ರಾಫ್ಟ್ಗಳನ್ನು ನೀಡಲಿದೆ ಎಂದು ಅವರು ಹೇಳಿದರು. 1960 ವಿಮಾನಗಳು ಏಕ ಹಜಾರ್( ಸಾಧಾರಣ)ವಾಗಿದ್ದರೆ, 260 ಬೃಹತ್ ಗಾತ್ರದ ಐಶಾರಾಮಿ ವಿಮಾನಗಳ ಮಾರಾಟ ಮಾಡುವುದಾಗಿ ಶೆಲ್ಟ್ ಹೇಳಿದರು. ಬಹಳಷ್ಟು ಮಹಿಳೆಯರು ಏವಿಯೇಷನ್ನಲ್ಲಿ ಬದುಕು ಕಂಡುಕೊಳ್ಳಲು ಮುಂದೆ ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತದ ವಿಮಾನಯಾನ ಸುಮಾರು 90 ಸಾವಿರ ಹೊಸ ಪೈಲಟ್ಗಳನ್ನು ಬೇಡುತ್ತಿದೆ ಎಂದೂ ಇದೇ ವೇಳೆ ಅವರು ತಿಳಿಸಿದರು.