ಕರ್ನಾಟಕ

karnataka

By

Published : Apr 2, 2019, 10:23 AM IST

ETV Bharat / business

ಏಪ್ರಿಲ್​ನಲ್ಲಿ ಸಾಲು ಸಾಲು ರಜೆ... ಬ್ಯಾಂಕ್​ ಗ್ರಾಹಕರಿಗೆ ಸಜೆ

ಈ ತಿಂಗಳಲ್ಲಿ ಒಂದರ ಹಿಂದೊಂದರಂತೆ ಬ್ಯಾಂಕ್‌ಗಳಿಗೆ 10 ದಿನ ರಜೆ ಸಿಗಲಿದೆ. ಹೀಗಾಗಿ, ಚಿಲ್ಲರೆ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು, ರಸ್ತೆ ಬದಿ ವ್ಯಾಪಾರಿಗಳು, ಅಗತ್ಯವಿರುವ ಹಣ ಹಾಗೂ ಬ್ಯಾಂಕ್‌ ವ್ಯವಹಾರಗಳಿಗೆ ಮುಂಚಿತವಾಗಿ ವಹಿವಾಟು ನಡೆಸುವುದು ಉತ್ತಮ.

ಬ್ಯಾಂಕ್ ರಜೆ

ಬೆಂಗಳೂರು:2019- 20ನೇ ಸಾಲಿನ ಹಣಕಾಸು ವರ್ಷ ಆರಂಭವಾಗಿದ್ದು, ಏಪ್ರಿಲ್ ತಿಂಗಳಲ್ಲಿ ಸಾಲು ಸಾಲು ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಸೇವೆ ಆಯಾದ ದಿನ ಸ್ಥಗಿತಗೊಳ್ಳಲಿದೆ.

ಒಂದರ ಹಿಂದೊಂದರಂತೆ ಬ್ಯಾಂಕ್‌ಗಳಿಗೆ 10 ದಿನ ರಜೆ ಸಿಗಲಿದೆ. ಹೀಗಾಗಿ, ಚಿಲ್ಲರೆ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು, ರಸ್ತೆ ಬದಿ ವ್ಯಾಪಾರಿಗಳು, ಅಗತ್ಯವಿರುವ ಹಣ ಹಾಗೂ ಬ್ಯಾಂಕ್‌ ವ್ಯವಹಾರಗಳಿಗೆ ಮುಂಚಿತವಾಗಿ ವಹಿವಾಟು ನಡೆಸುವುದು ಉತ್ತಮ.

ಮಾರ್ಚ್​ 31ರಂದು ಆರ್ಥಿಕ ವರ್ಷದ ಕೊನೆಯ ದಿನವಾಗಿದ್ದರಿಂದ ಹಿಂದಿನ ರಜಾ ದಿನದಂದು ಎಲ್ಲ ಬ್ಯಾಂಕ್​ಗಳು ಕಾರ್ಯನಿರ್ವಹಿಸಿದ್ದವು. ಹೀಗಾಗಿ, ಏಪ್ರಿಲ್​ 1ರಂದು ಎಲ್ಲ ಬ್ಯಾಂಕ್​ ಶಾಖೆಗಳು ಮುಚ್ಚಿದ್ದವು.

ಏಪ್ರಿಲ್ ತಿಂಗಳ ರಜಾ ದಿನಗಳು

1. ಏ. 6ರಂದು ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕ ರಜೆ
2. ಏ. 7ರಂದು ಭಾನುವಾರ ರಜೆ
3. ಏ. 13ರಂದು ರಾಮ ನವಮಿ ಮತ್ತು 2ನೇ ಶನಿವಾರ
4. ಏ. 14ರಂದು ಡಾ.ಬಿ.ಆರ್​. ಅಂಬೇಡ್ಕರ್​ ಜಯಂತಿ, ಭಾನುವಾರ ರಜೆ
5. ಏ. 17ರಂದು ಮಹಾವೀರ ಜಯಂತಿಯಂದು ಸಹ ಬ್ಯಾಂಕ್​ ಸೇವೆ ಸ್ಥಗಿತಗೊಳಲಿದೆ
6. ಏ.​ 19ರಂದು ಗುಡ್​ಫ್ರೈಡೇ ರಜೆ ಸಿಗಲಿದೆ
7. ಏ. 21ರಂದು ಭಾನುವಾರ
8. ಏ. 27ರಂದು 4ನೇ ಶನಿವಾರವಾದ್ದರಿಂದ ಬ್ಯಾಂಕ್​ಗೆ ರಜೆ ಇರಲಿದೆ
9. ಏ.​ 28ರಂದು ಭಾನುವಾರ ರಜೆ

ABOUT THE AUTHOR

...view details