ಕರ್ನಾಟಕ

karnataka

ETV Bharat / business

ಮೋದಿ 2.0 ಸರ್ಕಾರದ ಮೇಲೆ ಪ್ರಹಾರ ಮಾಡಿದ ಟ್ರಂಪ್​​....   ದೊಡ್ಡಣ್ಣ ನೀಡಿದ ಆ ಹೊಡೆತ ಯಾವುದು? ​

ಭಾರತವು ತನ್ನ ಮಾರುಕಟ್ಟೆಯಲ್ಲಿ ಅಮೆರಿಕದ ಸರಕುಗಳಿಗೆ ನ್ಯಾಯಯುತವಾದ ಪ್ರವೇಶ ಒದಗಿಸುವ ಭರವಸೆ ನೀಡಲಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ: ಟ್ರಂಪ್

By

Published : Jun 1, 2019, 10:26 AM IST

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್​:ಅಮೆರಿಕ ವಿದೇಶ ವ್ಯಾಪಾರದಲ್ಲಿ ಭಾರತಕ್ಕೆ ನೀಡಿದ್ದ ಆದ್ಯತಾ ವ್ಯಾಪಾರ ಒಪ್ಪಂದದ ಅನುಕೂಲತೆ ಜೂನ್ 5ಕ್ಕೆ ಕೊನೆಗೊಳ್ಳಲಿದೆ.

ಭಾರತಕ್ಕೆ ನೀಡಲಾಗಿರುವ ಸಾಮಾನ್ಯ ಆದ್ಯತಾ ಕಾರ್ಯಕ್ರಮವನ್ನು (ಜಿಎಸ್​ಪಿ) ಜೂನ್​ 5ರಿಂದ ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಸ್​ಪಿ ಅಮೆರಿಕದ ಬೃಹತ್ ಹಾಗೂ ಹಳೆಯ ವಾಣಿಜ್ಯ ವಹಿವಾಟು ವ್ಯವಸ್ಥೆಯಾಗಿದ್ದು, ಆಯ್ದ ಕೆಲವು ರಾಷ್ಟ್ರಗಳಿಗೆ ಮಾತ್ರವೇ ಸುಂಕರಹಿತವಾಗಿ ಸಾವಿರಾರು ಸರಕು ಮತ್ತು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಭಾರತಕ್ಕೆ ನೀಡಿದ್ದ ಜಿಎಸ್​ಪಿ ಸ್ಥಾನ ಸ್ಥಗಿತಗೊಳಿಸಲು ಮಾರ್ಚ್​ 4ರಂದು ನಿರ್ಧರಿಸಿದ್ದರು. ಇದು ಜೂನ್​ 5ಕ್ಕೆ ಅಧಿಕೃತವಾಗಿ ಜಾರಿಗೆ ಬರುತ್ತಿದೆ.

ಭಾರತವು ತನ್ನ ಮಾರುಕಟ್ಟೆಯಲ್ಲಿ ಅಮೆರಿಕದ ಸರಕುಗಳಿಗೆ ನ್ಯಾಯಯುತವಾದ ಪ್ರವೇಶ ಒದಗಿಸುವ ಭರವಸೆ ನೀಡಲಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಭಾರತದ ಜೊತೆಗೆ ಜನರಲೈಸ್ಡ್​ ಸಿಸ್ಟಂ ಆಫ್​ ಪ್ರಿಫರೆನ್ಸ್ ಅನ್ನು ಅಮಾನತುಗೊಳಿಸುವ ಒಪ್ಪಂದ ಮಾನ್ಯಗೊಂಡಿದೆ. ಒಂದು ವೇಳೆ ಭಾರತ ನಮ್ಮ ಸರಕು ಮತ್ತು ಉತ್ಪನ್ನಗಳಿಗೆ ಆದ್ಯತೆ ನೀಡಿದ್ದೇ ಆದಲ್ಲಿ ಮತ್ತೆ ಜಿಎಸ್​ಪಿ ಅನ್ನು ಪುನರಾರಂಭಿಸುತ್ತೇವೆ. ಭಾರತದ ಸರಕುಗಳಿಗೆ ಮುಕ್ತ ಮಾರುಕಟ್ಟೆ ಪ್ರವೇಶಿಸುವ ಭರವಸೆಯನ್ನು ಇಲ್ಲಿನ ಹಿರಿಯ ಅಧಿಕಾರಿಗಳು ನೀಡಿದ್ದಾರೆ..

For All Latest Updates

TAGGED:

ABOUT THE AUTHOR

...view details