ನವದೆಹಲಿ: ನೂತನವಾಗಿ ಜಾರಿಗೆ ತಂದಿರುವ ಸಾಲ ಖಾತರಿ ಯೋಜನೆಯಡಿ 25 ಲಕ್ಷ ಮಂದಿ ಮೈಕ್ರೋ ಫೈನಾನ್ಸ್ ಮೂಲಕ ಸಾಲ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾಮಾರನ್ ಘೋಷಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಸಾಲ ನೀಡಲಾಗುವುದು. ಇದರಲ್ಲಿ ಗರಿಷ್ಠ 1.25 ಲಕ್ಷ ಸಾಲ ಸಿಗಲಿದೆ. ಮರುಪಾವತಿಗೆ 3 ವರ್ಷಗಳ ವರೆಗೆ ಕಲಾವಾಶ ಇದೆ. ಸಣ್ಣ ನಗರಗಳಲ್ಲಿನ ಫಲಾನುಭವಿಗಳಿಗೆ ಈ ಯೋಜನೆ ಅನುಕೂಲವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಭಾರಿ ಹೊಡೆತಕ್ಕೆ ಸಿಲುಕಿರುವ ವಿವಿಧ ವಲಯಗಳಿಗೆ ಆರ್ಥಿಕ ಟಾನಿಕ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ವಿವಿಧ ಕ್ಷೇತ್ರಗಳಿಗೆ 1.1 ಲಕ್ಷ ಕೋಟಿ ರೂ.ಗಳ ಯೋಜನೆಯನ್ನು ಘೋಷಿಸಿದೆ.
ಆರೋಗ್ಯ ಕ್ಷೇತ್ರಕ್ಕೆ 50 ಸಾವಿರ ಕೋಟಿ ಹಾಗೂ ಇತರ ವಲಯಗಳಿಗೆ ಹೆಚ್ಚುವರಿಯಾಗಿ 60 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.