ವಾಷಿಂಗ್ಟನ್: ವಿಡಿಯೋ ಟಿಕ್‌ಟಾಕ್ ಆ್ಯಪ್ ಬೆಂಬಲಕ್ಕೆ ಬಳಸುವ ಎಲ್ಲ ಸ್ವತ್ತುಗಳಿಂದ ಹೊರಬರುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಕಂಪನಿ ಬೈಟ್‌ಡ್ಯಾನ್ಸ್‌ಗೆ 90 ದಿನಗಳ ಕಾಲಾವಕಾಶ ನೀಡಿದ್ದಾರೆ.
ಬೈಟ್‌ಡ್ಯಾನ್ಸ್ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಕ್ರಮ ತೆಗೆದುಕೊಳ್ಳಬಹುದು ಎಂದು ನಂಬಲಾರ್ಹ ಮೂಲಗಳು ಟ್ರಂಪ್ ಗಮನಕ್ಕೆ ತಂದಿದ್ದರಿಂದ ಈ ಗಡುವು ನೀಡಿದ್ದಾರೆ.
ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ಅಪಾಯವಿದೆ ಎಂದು ಉಲ್ಲೇಖಿಸಿದ ಟ್ರಂಪ್, ಕಳೆದ ವಾರ ಟಿಕ್‌ಟಾಕ್‌ನ ಚೀನಾ ಮಾಲೀಕರು ಮತ್ತು ಮೆಸೇಜಿಂಗ್ ಆ್ಯಪ್ ವೀಚಾಟ್ ನಿಷೇಧಕ್ಕೆ ಆದೇಶಿಸಿದ್ದರು.