ಮುಂಬೈ:ಸರ್ಕಾರಿ ಸೆಕ್ಯುರಿಟೀಸ್ (ಜಿ-ಸೆಕ್) ಮಾರುಕಟ್ಟೆಯಲ್ಲಿ ಚಿಲ್ಲರೆ ಭಾಗವಹಿಸುವಿಕೆ ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಹೂಡಿಕೆದಾರರಿಗೆ ಜಿ-ಸೆಕ್ ಮಾರುಕಟ್ಟೆಗೆ ನೇರ ಪ್ರವೇಶ ನೀಡಲು ನಿರ್ಧರಿಸಿದೆ.
ಪ್ರಮುಖ ರಚನಾತ್ಮಕ ಸುಧಾರಣೆಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಘೋಷಿಸಿದ್ದಾರೆ. 'ಹೂಡಿಕೆದಾರರಿಗೆ ಸೌಲಭ್ಯವನ್ನು ನೀಡುವ ಆಯ್ದ ದೇಶಗಳ ಗುಂಪನ್ನು ಭಾರತ ಸೇರಲಿದೆ' ಎಂದು ದಾಸ್ ಹೇಳಿದ್ದಾರೆ.
ಹೊಸ ವ್ಯವಸ್ಥೆ, ರಿಟೇಲ್ ಡೈರೆಕ್ಟ್, ಆರ್‌ಬಿಐ ಮೂಲಕ ಚಿಲ್ಲರೆ ಹೂಡಿಕೆದಾರರಿಗೆ ನೇರ ಪ್ರವೇಶ ನೀಡುತ್ತದೆ. ಅಂತಹ ಹೂಡಿಕೆದಾರರಿಗೆ ಅಪೆಕ್ಸ್ ಬ್ಯಾಂಕಿನಲ್ಲಿ ಗಿಲ್ಟ್ ಖಾತೆ ತೆರೆಯಲು ಇದು ಅವಕಾಶ ನೀಡುತ್ತದೆ.
2021-22ರ ಸಾಲ ಪಡೆಯುವ ಗುರಿಯನ್ನು ಸುಗಮವಾಗಿ ಪೂರೈಸಲು ಈ ಕ್ರಮವು ಸಹಾಯ ಮಾಡುತ್ತದೆ. ಸೌಲಭ್ಯದ ವಿವರಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಮತ್ತೆ ಪೆಟ್ರೋಲ್ ದರ ಸ್ಫೋಟ: ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ!