ಮುಂಬೈ:ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 150 ಪಾಯಿಂಟ್ಗಳಷ್ಟು ಏರಿಕೆ ಕಂಡಿದೆ. ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಎಸ್ಸಿ 58,875.78ಕ್ಕೆ ಜಿಗಿತ ಕಂಡಿದೆ. ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್ ಮತ್ತು ಎಚ್‌ಸಿಎಲ್ ಟೆಕ್‌ನಲ್ಲಿ ಲಾಭ ಗಳಿಸಿವೆ.
ನವದೆಹಲಿಯ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲೂ ಕೂಡಾ ಸ್ವಲ್ಪ ಮಟ್ಟಿಗೆ ಆರ್ಥಿಕ ಬೆಳವಣಿಗೆಗಳಲ್ಲಿ ಚೇತರಿಕೆ ಕಂಡು ಬಂದಿದೆ. ಆರಂಭಿಕ ವಹಿವಾಟಿನಲ್ಲಿ ಇಲ್ಲೂ ಕೂಡಾ ಸುಮಾರು 50 ಪಾಯಿಂಟ್ಗಳಷ್ಟು ಏರಿಕೆ ಕಂಡು ಬಂದಿದೆ.
ಮತ್ತೊಂದೆಡೆ, HUL, Titan, Asian Paints, HDFC ಸೂಚ್ಯಂಕದಲ್ಲಿ ಹಿಂದೆ ಬಿದ್ದಿವೆ. ಈ ಮೊದಲು 30 -ಷೇರು ಸೂಚ್ಯಂಕವು 476.11 ಪಾಯಿಂಟ್‌ಗಳು ಅಥವಾ 0.82 ಶೇಕಡಾ ಏರಿಕೆಯಾಗಿ 58,723.20ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 139.45 ಪಾಯಿಂಟ್ ಏರಿಕೆ ಕಂಡು 17,519.45 ವ್ಯವಹಾರ ಮುಂದುವರಿಸಿದೆ.
ಏಷ್ಯಾದ ಟೋಕಿಯೋ, ಶಾಂಘೈ, ಸಿಯೋಲ್ ಮತ್ತು ಹಾಂಕಾಂಗ್ನ ಷೇರು ವ್ಯವಹಾರಗಳಲ್ಲಿ ನಷ್ಟ ಅನುಭವಿಸಿವೆ. ಅಮೆರಿಕದ ಷೇರುಗಳು ಲಾಭದೊಂದಿಗೆ ಕೊನೆಗೊಂಡಿವೆ. ಕೇಂದ್ರ ಸರ್ಕಾರ production-linked incentive (PLI) ವಿಚಾರದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳೂ ಕೂಡಾ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ:ಏರ್ ಇಂಡಿಯಾ ಮಾರಾಟಕ್ಕೆ ಹಣಕಾಸಿನ ಬಿಡ್ ಕರೆದ ಕೇಂದ್ರ.. ಟಾಟಾ ಗ್ರೂಪ್, ಸ್ಪೈಸ್ ಜೆಟ್ ಭಾಗಿ ಸಾಧ್ಯತೆ..