ಕರ್ನಾಟಕ

karnataka

ETV Bharat / business

6 ದಿನದಲ್ಲಿ 1.47 ಲಕ್ಷ ರೂ. ಬಾಕಿ ಕೊಡುವಂತೆ ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ತಾಕೀತು - ಐಡಿಯಾ ವೋದಾಫೋನ್

ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ ಮೊತ್ತ ಪ್ರಕರಣದಲ್ಲಿ ಅಕ್ಟೋಬರ್ 24ರಂದು ಕೇಂದ್ರದ ಪರ ತೀರ್ಪು ನೀಡಿದ್ದ ಸುಪ್ರೀಂ, 92.642 ಕೋಟಿ ರೂ. ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. 3 ತಿಂಗಳ ಒಳಗಡೆ ಈ ಹಣ ಪಾವತಿಸುವಂತೆ ಗಡುವು ಸಹ ಕೊಟ್ಟಿತ್ತು. ಈ ತೀರ್ಪನ್ನು ಪರಾಮರ್ಶಿಸುವಂತೆ ಅರ್ಜಿ ಸಲ್ಲಿಸಿದ್ದವು.

SC
ಸುಪ್ರೀಂ

By

Published : Jan 16, 2020, 10:09 PM IST

ನವದೆಹಲಿ:ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್) ಮೊತ್ತದಲ್ಲಿ ಬಡ್ಡಿ ಮತ್ತು ದಂಡ ಪಾವತಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ತೀರ್ಪು ಅನ್ನು ಪರಾಮರ್ಶಿಸುವಂತೆ ಭಾರ್ತಿ ಏರ್​ಟೆಲ್ ಮತ್ತು ವೊಡಾಫೋನ್- ಐಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ.

ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 24ರಂದು ಕೇಂದ್ರದ ಪರ ತೀರ್ಪು ನೀಡಿದ್ದ ಸುಪ್ರೀಂ, 92.642 ಕೋಟಿ ರೂ. ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. 3 ತಿಂಗಳ ಒಳಗಡೆ ಈ ಹಣ ಪಾವತಿಸುವಂತೆ ಗಡುವು ಸಹ ಕೊಟ್ಟಿತ್ತು. ಈ ತೀರ್ಪನ್ನು ಪರಾಮರ್ಶಿಸುವಂತೆ ಅರ್ಜಿ ಸಲ್ಲಿಸಿದ್ದವು.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್​.ಎ ನಝೀರ್​ ಮತ್ತು ಎಂ. ಆರ್​ ಶಾ ಅವರಿದ್ದ ನ್ಯಾಯಪೀಠ ಭಾರತಿ ಏರ್​ಟೆಲ್ ಹಾಗೂ ವೋಡಾಫೋನ್- ಐಡಿಯಾ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ. ಜನವರಿ 23ರೊಳಗೆ ಬಾಕಿ ಉಳಿಸಿಕೊಂಡಿರುವ 1.47 ಲಕ್ಷ ಕೋಟಿ ರೂ. ಪಾವತಿಸುವಂತೆ ತಾಕೀತು ಮಾಡಿದೆ.

ABOUT THE AUTHOR

...view details