ಕರ್ನಾಟಕ

karnataka

ETV Bharat / business

ಬಿಎಸ್​​ 4 ವಾಹನ ಖರೀದಿದಾರರಿಗೆ ಸಿಹಿ ಸಮಾಚಾರ ಕೊಟ್ಟ ಸುಪ್ರೀಂಕೋರ್ಟ್​! - ಎಸ್​ಸಿ

ಮಾರ್ಚ್​ 31ರ ಗಡುವಿನ ಮೊದಲು ವಾಹನ ಖರೀದಿಸಿದ್ದು, ನೋಂದಣಿ ಸಾಧ್ಯವಾಗದವರಿಗೆ ವಾಹನ ನೋಂದಣಿಗೆ ಸುಪ್ರೀಂಕೋರ್ಟ್​ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ. ಇದಕ್ಕೂ ಮೊದಲು ಬಿಎಸ್​-4 ವಾಹನಗಳ ಮಾರಾಟ ಮತ್ತು ನೋಂದಣಿಗೆ ಕೋರ್ಟ್​ 31ರ ಗಡುವು ನೀಡಿತ್ತು. ಈ ಮಧ್ಯೆ ಮಾರ್ಚ್​ 22ರ ಬಳಿಕ ಲಾಕ್​ಡೌನ್​ ವಿಧಿಸಲಾಗಿತ್ತು.

SC
ಎಸ್​ಸಿ

By

Published : Aug 13, 2020, 9:19 PM IST

ನವದೆಹಲಿ:ಮಾಲಿನ್ಯಕಾರಕ ಭಾರತ್ ಸ್ಟೇಜ್ -4 ವಾಹನ ಮಾರಾಟ ಸಂಬಂಧ ಸುಪ್ರೀಂಕೋರ್ಟ್ ಗುರುವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಮಾರ್ಚ್‌ನಲ್ಲಿ ಮಾರಾಟವಾದ ಬಿಎಸ್ 4 ವಾಹನಗಳ ನೋಂದಣಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಕೊರೊನಾ ವೈರಸ್ ಪ್ರೇರಿತ ಲಾಕ್‌ಡೌನ್ ಹೇರಿಕೆಯ ಕಾರಣದಿಂದ ಉದ್ದೇಶಿತ ನಿಷೇಧ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಬಿಎಸ್ 4 ವಾಹನಗಳ ಮಾರಾಟ ಮತ್ತು ನೋಂದಣಿಗೆ ಸಂಬಂಧ ವಿಚಾರಣೆ ಆಲಿಸಿತ್ತು.

ತನ್ನ ಈ ಹಿಂದಿನ ಕೊನೆಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮುಂದಿನ ಆದೇಶಗಳವರೆಗೆ ನೋಂದಣಿಗಳನ್ನು ತಡೆಹಿಡಿದಿತ್ತು. ಲಾಕ್​ಡೌನ್​ನಂತಹ ನಿರ್ಬಂಧಿತ ಮತ್ತು ಅಲ್ಪಾವಧಿಯಲ್ಲಿಯೇ ದೊಡ್ಡ ಪ್ರಮಾಣದ ವಾಹನಗಳ ಮಾರಾಟ ಮಾಡಿದ್ದ ಬಗ್ಗೆ ಕೋರ್ಟ್​ ಶಂಕಿಸಿತ್ತು.

ಸುಪ್ರೀಂ ಕೋರ್ಟ್ ಸಲ್ಲಿಸಿದ ಅಫಿಡವಿಟ್​​ನಲ್ಲಿ ಸರ್ಕಾರವು ವಿವರ ನೀಡಿದೆ. ಇ-ವಾಹನ್ ಪೋರ್ಟಲ್‌ನಲ್ಲಿ ಮಾರಾಟವಾದ ವಾಹನಗಳ ಸಂಖ್ಯೆ ಮತ್ತು ಅಪ್‌ಲೋಡ್ ಮಾಡಿದ ವಾಹನಗಳ ಸಂಖ್ಯೆ ಕೇಳಿತ್ತು.

ಮಾರ್ಚ್​ 31ರ ಗಡುವಿನ ಮೊದಲು ವಾಹನ ಖರೀದಿಸಿದ್ದು, ನೋಂದಣಿ ಸಾಧ್ಯವಾಗದವರಿಗೆ ವಾಹನ ನೋಂದಣಿಗೆ ಸುಪ್ರೀಂಕೋರ್ಟ್​ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ. ಇದಕ್ಕೂ ಮೊದಲು ಬಿಎಸ್​-4 ವಾಹನಗಳ ಮಾರಾಟ ಮತ್ತು ನೋಂದಣಿಗೆ ಕೋರ್ಟ್​ 31ರ ಗಡುವು ನೀಡಿತ್ತು. ಈ ಮಧ್ಯೆ ಮಾರ್ಚ್​ 22ರ ಬಳಿಕ ಲಾಕ್​ಡೌನ್​ ವಿಧಿಸಲಾಗಿತ್ತು.

ABOUT THE AUTHOR

...view details