ಕರ್ನಾಟಕ

karnataka

ETV Bharat / business

2022ರ GDP​ ಬೆಳವಣಿಗೆ ಅಂದಾಜು ಶೇ 10.4ರಿಂದ 7.9ಕ್ಕೆ ತಗ್ಗಿಸಿದ SBI ಅರ್ಥಶಾಸ್ತ್ರಜ್ಞರು - FY22 GDP growth estimate

ಎಸ್‌ಬಿಐ ಅರ್ಥಶಾಸ್ತ್ರಜ್ಞರು ತಮ್ಮ 2021-22ರ ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಶೇ 7.9ಕ್ಕೆ ತಗ್ಗಿಸಿದ್ದ, ಈ ಮೊದಲು ಶೇ 10.4ರಷ್ಟು ಇರಲಿದೆ ಎಂದು ಊಹಿಸಿದ್ದರು. ಕೋವಿಡ್​-19 ಸೋಂಕುಗಳ ಎರಡನೇ ಅಲೆಯ ಪ್ರಭಾವದಿಂದಾಗಿ ಬೆಳವಣಿಗೆಯ ಅಂದಾಜನ್ನು ಪರಿಷ್ಕರಿಸಿದ್ದು, ವೇಗವಾಗಿ ವ್ಯಾಕ್ಸಿನೇಷನ್​ ಮುಂದುವರಿಸುವಂತೆ ಸಲಹೆ ನೀಡಿದ್ದಾರೆ.

GDP
GDP

By

Published : Jun 1, 2021, 7:43 PM IST

ನವದೆಹಲಿ:ಹಲವು ರಾಜ್ಯಗಳಲ್ಲಿ ಜೂನ್ ಮಾಸಿಕ ಬಳಿಕವೂ ಲಾಕ್‌ಡೌನ್‌ಗಳ ವಿಸ್ತರಣೆ ಆಗಿದ್ದರಿಂದ ಎಸ್‌ಬಿಐ ಅರ್ಥಶಾಸ್ತ್ರಜ್ಞರು, 2021-22ರ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ಅಂದಾಜನ್ನು ಶೇ 10.4ರಿಂದ 7.9ಕ್ಕೆ ಕಡಿತಗೊಳಿಸಿದ್ದಾರೆ.

ಎಸ್‌ಬಿಐ ಅರ್ಥಶಾಸ್ತ್ರಜ್ಞರು ತಮ್ಮ 2021-22ರ ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಶೇ 7.9ಕ್ಕೆ ತಗ್ಗಿಸಿದ್ದು, ಈ ಮೊದಲು ಶೇ 10.4ರಷ್ಟು ಇರಲಿದೆ ಎಂದು ಊಹಿಸಿದ್ದರು.

ಸರ್ಕಾರಿ ಸಾಲದಾತ ಎಸ್​ಬಿಐನ ಅರ್ಥಶಾಸ್ತ್ರಜ್ಞರು ಕೋವಿಡ್​-19 ಸೋಂಕುಗಳ ಎರಡನೇ ಅಲೆಯ ಪ್ರಭಾವದಿಂದಾಗಿ ಬೆಳವಣಿಗೆಯ ಅಂದಾಜನ್ನು ಪರಿಷ್ಕರಿಸಿದ್ದಾರೆ. ವೇಗವಾಗಿ ವ್ಯಾಕ್ಸಿನೇಷನ್​ ಮುಂದುವರಿಸುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 'ಬೆಂಗಳೂರು ಭಾರತದ ಸಿಲಿಕಾನ್​ ವ್ಯಾಲಿ' ಥ್ರಿಲ್ಲಾಗಿಲ್ಲ: ಬೆಸ್ಟ್ ಹೆಸರು ಕೊಟ್ಟವರಿಗೆ ’ಮಹೀಂದ್ರಾ’ ಅಚ್ಚರಿಯ ಗಿಫ್ಟ್​!

ನಮ್ಮ ವಿಶ್ಲೇಷಣೆಯು ಈ ಬಾರಿ ಆರ್ಥಿಕತೆಯ ಮೇಲೆ ಅಸಮ ಪ್ರಮಾಣದಲ್ಲಿ ದೊಡ್ಡ ಪರಿಣಾಮವನ್ನು ತೋರಿಸುತ್ತದೆ. ಗ್ರಾಮೀಣವು ನಗರಗಳಂತೆ ಚೇತರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಸರಕುಗಳ ಬೆಲೆಗಳು ಜಿಡಿಪಿ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತವೆ. ಒಟ್ಟಾರೆ ಬಳಕೆಯ ಪಥವು 'ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಸಂವಹನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳ ಚೇತರಿಕೆಯ ಮೇಲೆ 25 ಕೋಟಿ ಕುಟುಂಬಗಳು ಅವಲಂಬಿತವಾಗಿವೆ ಎಂದು ಹೇಳಿದರು.

2022ರ ನೈಜ ಜಿಡಿಪಿ 145.8 ಲಕ್ಷ ಕೋಟಿ ರೂ. 2020ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಇದನ್ನು ಎರಡು ತೊಟ್ಟಿಗಳೊಂದಿಗೆ 'ಡಬ್ಲ್ಯೂ ಆಕಾರದ' ಚೇತರಿಕೆ ಎಂದು ಕರೆದಿದ್ದು, ಈ ಮೊದಲೇ ನಿರೀಕ್ಷಿಸಿದ ವಿ-ಆಕಾರದ ಚೇತರಿಕೆ ಅಲ್ಲ ಎಂದರು.

ಎರಡನೇ ಅಲೆ ಹಬ್ಬುವಿಕೆಯ ಹೊರತಾಗಿಯೂ, ಆರ್‌ಬಿಐ ತನ್ನ ಬೆಳವಣಿಗೆಯ ಅಂದಾಜು ಶೇ 10.5 ರಷ್ಟನ್ನು ಕಾಯ್ದುಕೊಂಡಿದೆ. ಈ ವಾರದ ನೀತಿ ಪರಿಶೀಲನೆಯಲ್ಲಿ ಈ ಸಂಖ್ಯೆಯಲ್ಲಿ ಒಂದು ನೋಟವನ್ನು ಹೊಂದಿರಬಹುದು ಎಂದರು.

ಸೋಮವಾರ ಬಿಡುಗಡೆಯಾದ ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಆರ್ಥಿಕತೆಯು ನಾಲ್ಕನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ವೇಗವಾಗಿ ಶೇ 1.6ಕ್ಕೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಇಡೀ ಹಣಕಾಸು ವರ್ಷದಲ್ಲಿ ಶೇ 7.3ರಷ್ಟು ಸಂಕೋಚನವಾಗಿದೆ.

ABOUT THE AUTHOR

...view details