ಮುಂಬೈ:ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿದಿದ್ದು, ಮಂಗಳವಾರ 12 ಪೈಸೆಗಳ ಇಳಿಕೆ ಕಂಡಿದೆ. ಇದರಿಂದಾಗಿ ಒಂದು ಡಾಲರ್ನ ಬೆಲೆ 73.49 ರೂಪಾಯಿಯಷ್ಟಾಗಿದ್ದು, ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ಗೆ 73.36 ರೂಪಾಯಿಯಂತೆ ಆರಂಭವಾಗಿದ್ದು, ಡಾಲರ್‌ಗೆ 73.49 ರೂಪಾಯಿಯಂತೆ ಅಂತ್ಯಗೊಂಡಿದೆ. ಈ ವೇಳೆ ಸುಮಾರು 12 ಪೈಸೆ ಕುಸಿತ ಕಂಡಿದೆ. ಇದಕ್ಕೂ ಮೊದಲು ಡಾಲರ್‌ಗೆ 73.37 ರೂಪಾಯಿಗಳಿಗೆ ಅಂತ್ಯವಾಗಿತ್ತು. ದಿನದ ಮಧ್ಯದಲ್ಲಿ ಡಾಲರ್ ಬೆಲೆ ಗರಿಷ್ಠ 73.29 ರೂಪಾಯಿಗೆ ಮತ್ತು ಕನಿಷ್ಠ 73.53 ರೂಪಾಯಿಗೆ ತಲುಪಿತ್ತು.