ಕರ್ನಾಟಕ

karnataka

ETV Bharat / business

ಪಿಎಂ ಕಿಸಾನ್ ಸ್ಕೀಮ್​ಗೆ 2 ವರ್ಷ: 10.75 ಕೋಟಿ ರೈತರಿಗೆ 1.15 ಲಕ್ಷ ಕೋಟಿ ರೂ. ನೇರ ವರ್ಗಾವಣೆ - ಪಿಎಂ ಕಿಸಾನ್​​ ಎರಡನೇ ವಾರ್ಷಿಕೋತ್ಸವ

ಐಟಿ ಹಾರ್ಡ್​ವೇರ್ ಮೌಲ್ಯ ಸರಣಿಯಲ್ಲಿ ಬೃಹತ್ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು ಈ ಉತ್ಪಾದನೆ ಆಧರಿತ ಪ್ರೋತ್ಸಾಹಕರ ಯೋಜನೆಯ ಉದ್ದೇಶವಾಗಿದೆ. ಈ ನಿರ್ದಿಷ್ಟ ಉದ್ದೇಶಿತ ಯೋಜನೆಯಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಆಲ್​ಇನ್ ಒನ್ ಪಿಸಿಗಳು ಮತ್ತು ಸರ್ವರ್​ಗಳು ಸೇರಿವೆ.

farmers
farmers

By

Published : Feb 24, 2021, 9:55 PM IST

ನವದೆಹಲಿ:ದೇಶದ ಕೃಷಿಕರ ಘನತೆ ಮತ್ತು ಸಮೃದ್ಧಿಯ ಜೀವನ ಖಚಿತಪಡಿಸುವ ಉದ್ದೇಶದಿಂದ ಜಾರಿಗೆ ತಂದ ಪ್ರಧಾನ ಮಂತ್ರಿಗಳ ಕಿಸಾನ್ ಯೋಜನೆಯು 2 ವರ್ಷ ಪೂರ್ಣಗೊಳಿಸಿದೆ.

ಪಿಎಂ-ಕಿಸಾನ್ ಯೋಜನೆಯಡಿ ನೇರವಾಗಿ 1.15 ಲಕ್ಷ ಕೋಟಿ ರೂ.ಗಳನ್ನು 10.75 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

ಎರಡನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ 6,000 ರೂ. ಮೂರು ಸಮಾನ ಕಂತುಗಳಲ್ಲಿ ನೀಡುವ ಮೂಲಕ ಸರ್ಕಾರ ರೈತರ ಆದಾಯ ಹೆಚ್ಚಿಸಿದೆ ಎಂದರು.

ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 24ರಂದು ಉತ್ತರ ಪ್ರದೇಶದ ಗೋರಖ್‌ಪುರದಿಂದ ಪ್ರಾರಂಭಿಸಿದ್ದರು.

ನರೇಂದ್ರ ಮೋದಿ ಅವರು ಈ ಕುರಿತು ಸರಣಿ ಟ್ವೀಟ್’ ಮಾಡಿದ್ದು, 2 ವರ್ಷಗಳ ಹಿಂದೆ ಇದೇ ದಿನ ನಮ್ಮ ಶ್ರಮಜೀವಿ ರೈತರ ಘನತೆ ಮತ್ತು ಸಮೃದ್ಧಿಯ ಜೀವನ ಖಚಿತಪಡಿಸಲು ಈ ಯೋಜನೆಯನ್ನು ಅನಾವರಣಗೊಳಿಸಲಾಗಿತ್ತು. ದೇಶದ ಜನತೆಗೆ ಆಹಾರದ ಅವಶ್ಯಕತೆಗಳನ್ನು ನಿರಂತರ ಒದಗಿಸಲು ಹಗಲಿರುಳು ಕಠಿಣ ಶ್ರಮ ವಹಿಸುವ ನಮ್ಮ ರೈತರ ತಾಳ್ಮೆ, ದೃಢತೆ ಮತ್ತು ಉತ್ಸಾಹ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರಿ ವ್ಯವಹಾರ ನಡೆಸಲು ಖಾಸಗಿ ಬ್ಯಾಂಕ್​ಗಳಿಗೆ ಅವಕಾಶ: ಪ್ರೈವೇಟ್​ ತೆಕ್ಕೆಗೆ ಯಾವೆಲ್ಲಾ ವಹಿವಾಟು?

ಕಳೆದ 7 ವರ್ಷಗಳಿಂದ ಕೇಂದ್ರ ಸರ್ಕಾರ ರೈತರ ಅಭ್ಯುದಯಕ್ಕಾಗಿ, ಕೃಷಿ ವಲಯದ ಪರಿವರ್ತನೆಗಾಗಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಉತ್ತಮ ನೀರಾವರಿಯಿಂದ ಹಿಡಿದು ಹೆಚ್ಚಿನ ತಂತ್ರಜ್ಞಾನ ಬಳಕೆವರೆಗೆ ಹೆಚ್ಚಿನ ಸಾಲ ಸೌಲಭ್ಯ ಮತ್ತು ಮಾರುಕಟ್ಟೆಯಿಂದ ಬೆಳೆ ವಿಮೆವರೆಗೆ, ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಮಣ್ಣಿನ ಆರೋಗ್ಯ ಕಾಪಾಡಲು ಗಮನ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಐತಿಹಾಸಿಕ ಹೆಚ್ಚಳ ಮಾಡಿದ ಗೌರವ ನಮ್ಮ ಸರ್ಕಾರದ್ದಾಗಿದೆ. ರೈತರ ವರಮಾನವನ್ನು ದುಪ್ಪಟ್ಟು ಮಾಡಲು ಸಾಧ್ಯವಿರುವ ಎಲ್ಲಾ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

ABOUT THE AUTHOR

...view details