ಕರ್ನಾಟಕ

karnataka

ETV Bharat / business

ಆರ್​ಸಿಇಪಿ ಒಪ್ಪಂದ:  ಭಾರತದ ಮನವೊಲಿಕೆಗೆ ಮುಂದಾಯ್ತಾ ಚೀನಾ? - ವ್ಯಾಪಾರ ಒಪ್ಪಂದ

ವಿಶ್ವದ ಅತಿದೊಡ್ಡ ವ್ಯಾಪಾರ ಒಪ್ಪಂದ ಸಹಿ ಬಗ್ಗೆ ಚೀನಾ ಸೇರಿ 14 ದೇಶಗಳು ಸೋಮವಾರ ಒಗ್ಗೂಡಿದ್ದವು. ಈ ಒಪ್ಪಂದವು ತನ್ನ ರೈತರ, ವ್ಯವಹಾರಗಳ, ಕಾರ್ಮಿಕರ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂಬ ಆತಂಕದ ನಡುವೆ ಭಾರತ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಸರಿಯಿತು. ಈಗ ಚೀನಾ ಭಾರತದ ಮನವೊಲಿಸಲು ಇದೊಂದು ರಫ್ತು ಅವಕಾಶಗಳನ್ನು ತೆರದಿಡಲಿದೆ ಎಂದು ಹೇಳುತ್ತಿದೆ.

ಆರ್​ಸಿಇಪಿ

By

Published : Nov 6, 2019, 12:40 PM IST

ಬೀಜಿಂಗ್​: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‌ಸಿಇಪಿ) ವ್ಯಾಪಾರ ಒಪ್ಪಂದವು ಭಾರತದ ರಫ್ತಿಗೆ ಹಲವು ಅವಕಾಶಗಳನ್ನು ತೆರದಿಡಲಿದೆ ಎಂದು ಚೀನಾದ ಉಪ ವಾಣಿಜ್ಯ ಸಚಿವರು ಬುಧವಾರ ಹೇಳಿದ್ದಾರೆ ಎನ್ನಲಾಗುತ್ತಿದೆ.

ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ವಾಣಿಜ್ಯ ಸಚಿವ ವಾಂಗ್ ಶೌವೆನ್, ಆರ್​ಸಿಇಪಿ ಒಪ್ಪಂದವು ತನ್ನ ಕೈಗಾರಿಕೆಗಳಿಗೆ ಹಾನಿಯಾಗಬಹುದೆಂಬ ಭಾರತದ ಕಳವಳವನ್ನು ಚೀನಾ ಅರ್ಥಮಾಡಿಕೊಂಡಿದೆ. ಆದರೆ, ಒಂದು ವೇಳೆ ಒಪ್ಪಂದಕ್ಕೆ ಭಾರತ ಮುಂದಾದರೆ ತನ್ನ ರಫ್ತು ಅವಕಾಶಗಳು ಹೆಚ್ಚಳವಾಗಲಿವೆ ಎಂದು ಹೇಳಿದರು.

ವಿಶ್ವದ ಅತಿದೊಡ್ಡ ವ್ಯಾಪಾರ ಒಪ್ಪಂದ ಸಹಿ ಬಗ್ಗೆ ಚೀನಾ ಸೇರಿ 14 ದೇಶಗಳು ಸೋಮವಾರ ಒಗ್ಗೂಡಿದ್ದವು. ಈ ಒಪ್ಪಂದವು ತನ್ನ ರೈತರ, ವ್ಯವಹಾರಗಳ, ಕಾರ್ಮಿಕರ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂಬ ಆತಂಕದ ನಡುವೆ ಭಾರತ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಸರಿಯಿತು.

ABOUT THE AUTHOR

...view details