ಮುಂಬೈ: ಕೋವಿಡ್ -19 ಸಾಂಕ್ರಾಮಿಕದ ದುಷ್ಪರಿಣಾಮಗಳನ್ನು ತಗ್ಗಿಸಲು ಎಲ್ಲ ವಿಧದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಬೆಳವಣಿಗೆ ಪುನಶ್ಚೇತನಗೊಳಿಸಲು ಮತ್ತು ಆರ್ಥಿಕತೆಯ ಸ್ಥಿರತೆ ಕಾಪಾಡಲು ಅಗತ್ಯವಾದ ಯಾವುದೇ ಕ್ರಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತೆಗೆದುಕೊಳ್ಳುತ್ತದೆ ಎಂದು ಗವರ್ನರ್ ಭರವಸೆ ನೀಡಿದ್ದಾರೆ.
ಮಾರ್ಚ್ 27ರಂದು ಆರ್‌ಬಿಐ ತನ್ನ ಪ್ರಮುಖ ಬಡ್ಡಿ ದರದಲ್ಲಿ 75 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿತ್ತು. ವೈರಸ್ ಹರಡುವಿಕೆಯಿಂದ ಉಂಟಾಗುವ ಆರ್ಥಿಕ ತೊಂದರೆಗಳನ್ನು ತಗ್ಗಿಸಲು. ದುರ್ಬಲ ವರ್ಗದವರಿಗೆ ನಗದು ವರ್ಗಾವಣೆ ಮತ್ತು ಆಹಾರದ ಭದ್ರತೆ ಸೇರಿದಂತೆ ಇತರ ಉತ್ತೇಜನ ಕ್ರಮಗಳಡಿ 1.70 ಲಕ್ಷ ಕೋಟಿ ರೂ. ಸಮಗ್ರ ಪ್ಯಾಕೇಜ್ ಅನ್ನು ಸರ್ಕಾರ ಘೋಷಿಸಿತ್ತು.
ವಿಶ್ವದಾದ್ಯಂತ ಕೋವಿಡ್ 19 ಸೋಂಕು ಹಬ್ಬುವಿಕೆ ತಡೆಯಲು ಲಾಕ್‌ಡೌನ್ ಘೋಷಿಸಿ ಸಾಮಾಜಿಕ ಅಂತಾರ ಕಾಪಾಡಿಕೊಳ್ಳಲಾಗುತ್ತಿದೆ. ಸ್ಥೂಲ ಆರ್ಥಿಕ ಕುಸಿತ ಎದುರಿಸಲು ಅನೇಕ ದೇಶಗಳಲ್ಲಿನ ಅಧಿಕಾರಿಗಳು ಮತ್ತು ಕೇಂದ್ರೀಯ ಬ್ಯಾಂಕ್ಗಳು ಬಹು ಉದ್ದೇಶಿತ ನೀತಿಗಳನ್ನು ಜಾರಿಗೆ ತಂದಿವೆ ಎಂದು ಆರ್‌ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.