ಕರ್ನಾಟಕ

karnataka

ETV Bharat / business

ಕಾರು ಉತ್ಪಾದನಾ ಸಂಸ್ಥೆಗಳಿಗೆ ಆರ್ಥಿಕ ಹಿಂಜರಿತದ ಕರಿಛಾಯೆ..! ತಜ್ಞರು ಏನು ಹೇಳುತ್ತಾರೆ..? - ಆರ್ಥಿಕ ಹಿಂಜರಿತ

ಕಳೆದ ಕೆಲವು ತಿಂಗಳಿನಿಂದ ಭಾರತದಲ್ಲಿ ಪ್ರಮುಖವಾಗಿ ಕಾರು ಬೇಡಿಕೆ ಗಣನೀಯವಾಗಿ ಕುಸಿತ ಕಂಡಿದೆ. ಈ ಪರಿಸ್ಥಿತಿ ಹಬ್ಬದ ತಿಂಗಳಲ್ಲೂ ಮೇಲೇಳುವ ಸಾಧ್ಯತೆ ತೀರಾ ಕಮ್ಮಿ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಕಾರು ಉತ್ಪಾದನಾ ಸಂಸ್ಥೆಗಳಿಗೆ ಆರ್ಥಿಕ ಹಿಂಜರಿತದ ಕರಿಛಾಯೆ

By

Published : Sep 30, 2019, 12:17 PM IST

ನವದೆಹಲಿ: ಆರ್ಥಿಕ ಹಿಂಜರಿತದ ಭೀತಿಯಲ್ಲಿ ಕಂಗಾಲಾಗಿರುವ ಕಾರು ಉತ್ಪಾದನಾ ಸಂಸ್ಥೆಗಳಿಗೆ ಸದ್ಯ ಮಾರುಕಟ್ಟೆ ವಿಶ್ಲೇಷಕರ ಹೇಳಿಕೆಗಳು ತಲ್ಲಣ ಮೂಡಿಸಿವೆ.

ಕಳೆದ ಕೆಲವು ತಿಂಗಳಿನಿಂದ ಭಾರತದಲ್ಲಿ ಪ್ರಮುಖವಾಗಿ ಕಾರು ಬೇಡಿಕೆ ಗಣನೀಯವಾಗಿ ಕುಸಿತ ಕಂಡಿದೆ. ಈ ಪರಿಸ್ಥಿತಿ ಹಬ್ಬದ ತಿಂಗಳಲ್ಲೂ ಮೇಲೇಳುವ ಸಾಧ್ಯತೆ ತೀರಾ ಕಮ್ಮಿ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ..! ನಿಮ್ಮಿಷ್ಟದ ಕಾರಿನ ಬೆಲೆ ಇಷ್ಟಿದೆ?

ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕತೆ, 45 ವರ್ಷಗಳಲ್ಲೇ ಅತಿದೊಡ್ಡ ನಿರುದ್ಯೋಗ ಸಮಸ್ಯೆಗಳು ಸದ್ಯ ಭಾರತದಲ್ಲಿ ವಿವಿಧ ಕ್ಷೇತ್ರಗಳನ್ನು ದಂಗಾಗಿಸಿದೆ.

ಉತ್ಪಾದನಾ ವೆಚ್ಚವನ್ನು ನೀವು ಶೇ.50ರಷ್ಟು ಇಳಿಕೆ ಮಾಡಬಹುದು ಆದರೆ ಬೇಡಿಕೆ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞ ನಿತಿನ್ ಗುಪ್ತ.

ಹಬ್ಬದ ಸಮಯದಲ್ಲೂ ಕಾರುಗಳ ಬೇಡಿಕೆ ವೃದ್ಧಿಯಾಗುವ ಲಕ್ಷಣಗಳಿಲ್ಲ. ಕಾರ್ಪೋರೇಟ್ ತೆರಿಗೆ ಕಡಿತ ಮಾಡಿದ್ದರೂ ತಕ್ಷಣಕ್ಕೆ ಅದು ಫಲಿತಾಂಶ ನೀಡುವುದಿಲ್ಲ. ಅದು ದೀರ್ಘಕಾಲಿಕವಾಗಿ ಉತ್ತಮ ಪರಿಣಾಮ ಬೀರಲಿದೆ ಎಂದು ನಿತಿನ್ ಗುಪ್ತಾ ಹೇಳುತ್ತಾರೆ.

ಕಾರುಪ್ರಿಯರಿಗೆ ಗುಡ್​ನ್ಯೂಸ್: ವೋಕ್ಸ್​ವೇಗನ್ ಕಾರುಗಳಿಗೆ ಭಾರಿ ಡಿಸ್ಕೌಂಟ್!

ಈ ಬಾರಿ ಬ್ಲಾಕ್​ಬಸ್ಟರ್ ಫೆಸ್ಟಿವ್ ಸೀಸನ್ ನಿರೀಕ್ಷೆ ಖಂಡಿತಾ ಇಲ್ಲ. ಈ ಬಾರಿ ಸಂಪೂರ್ಣ ತಟಸ್ಥ ಇಲ್ಲವೇ ನೀರಸವಾಗಿರಲಿದೆ ಎಂದು ಮತ್ತೋರ್ವ ಮಾರುಕಟ್ಟೆ ವಿಶ್ಲೇಷಕ ಹರ್ಷಿತ್ ಕಪಾಡಿಯಾ ಹೇಳಿದ್ದಾರೆ.

ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಭಾರತದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಹತ್ತಕ್ಕೂ ಅಧಿಕ ಕಾರುಗಳ ಬೆಲೆಯನ್ನು ಸುಮಾರು ₹5,000 ಇಳಿಕೆ ಮಾಡಿದೆ. ವೋಕ್ಸ್​ವೇಗನ್ ಸಂಸ್ಥೆ ಸಹ ಮಾರುತಿ ಸುಜುಕಿ ಸಂಸ್ಥೆಯ ಹಾದಿಯನ್ನೇ ಅನುಸರಿಸಿದ್ದು ಹಲವು ಕಾರುಗಳ ಬೆಲೆಯನ್ನು ಇಳಿಸಿದೆ.

ABOUT THE AUTHOR

...view details