ನವದೆಹಲಿ :ಮೂಡಿಸ್ ಇನ್ವೆಸ್ಟರ್ಸ್ ಸರ್ವೀಸ್ 2020ರಲ್ಲಿನ ಭಾರತದ ಜಿಡಿಪಿ ಶೇ. 2.5ರಷ್ಟು ಇರಲಿದೆ ಎಂದು ಅಂದಾಜಿಸಿದೆ.
ಈ ಹಿಂದೆ ಭಾರತದ ಜಿಡಿಪಿ ಶೇ. 5.3ರಷ್ಟು ಇರಲಿದೆ ಎಂದು ಭವಿಷ್ಯ ನುಡಿದಿತ್ತು. ಜಗತ್ತಿನಾದ್ಯಂತ ಆವರಿಸಿರುವ ಕೊರೊನಾ ವೈರಸ್ ಬಿಕ್ಕಟ್ಟು ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಬೆಳವಣಿಗೆ ದರ ಇಳಿಕೆ ಮಾಡಿದ್ದಾಗಿ ಸ್ಪಷ್ಟನೆ ನೀಡಿದೆ. ಭಾರತವು ಅಂದಾಜು ಶೇ. 2.5ರಷ್ಟು ಬೆಳವಣಿಗೆಯ ದರದಲ್ಲಿ ಆದಾಯದಲ್ಲಿ ತೀವ್ರ ಕುಸಿತ ಕಾಣುವ ಸಾಧ್ಯತೆಯಿದೆ.
ಇದು ದೇಶಿಯ ಬೇಡಿಕೆ ಮತ್ತು 2021ರಲ್ಲಿ ಚೇತರಿಕೆಯ ವೇಗ ಮತ್ತಷ್ಟು ತಗ್ಗಲಿದೆ ಎಂದು ಗ್ಲೋಬಲ್ ಮ್ಯಾಕ್ರೋ ಔಟ್ಲುಕ್ 2020-21ರಲ್ಲಿ ಹೇಳಿದೆ. ಭಾರತದಲ್ಲಿ ಸಾಲದ ಹರಿವು ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಕ್ಷೇತ್ರಗಳಲ್ಲಿನ ತೀವ್ರ ನಗದು ನಿರ್ಬಂಧದಿಂದಾಗಿ ಆರ್ಥಿಕತೆಯು ಈಗಾಗಲೇ ತೀವ್ರ ಅಡಚಣೆಗೊಳಗಾಗಿದೆ ಎಂದು ಹೇಳಿದೆ.