ಕರ್ನಾಟಕ

karnataka

ETV Bharat / business

ವಿದೇಶದಿಂದ ಬರಲಿರುವ ದೇಶಿ ವಲಸಿಗರ ಸ್ವೀಕಾರಕ್ಕೆ ಸಜ್ಜು: ಏರ್​ಪೋರ್ಟ್​ಗಳಲ್ಲಿ ತಪಾಸಣೆ

ಎನ್‌ಆರ್‌ಕೆಗಳನ್ನು ಸ್ವೀಕರಿಸಲು ಕೇರಳದ ಕೊಚ್ಚಿ, ಕೋಯಿಕೋಡ್ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ತಿರುವನಂತಪುರಂಗೆ ಆಗಮಿಸುವವರಿಗೆ 11,200ಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಕಲ್ಪಿಸಲು 6 ತಾಲೂಕುಗಳಲ್ಲಿ ಸಂಪರ್ಕ ತಡೆ ಕಲ್ಪಿಸಲಾಗಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇನ್ನೂ 6,400 ಜನರಿಗೆ ಹೋಟೆಲ್ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದು ಅವರೇ ಪಾವತಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Airlift
ಏರ್​ಲಿಫ್ಟ್​

By

Published : May 6, 2020, 7:49 PM IST

ತಿರುವನಂತಪುರಂ: ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಕೊಲ್ಲಿ ಸೇರಿದಂತೆ ಇತರೆ ದೇಶಗಳಲ್ಲಿ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಭಾರತ ಅತಿದೊಡ್ಡ ಏರ್​ ಲಿಫ್ಟ್​ ಆರಂಭಿಸುತ್ತಿದ್ದಂತೆ ಕೇರಳದ ಮೂರು ವಿಮಾನ ನಿಲ್ದಾಣಗಳು ಸುಮಾರು 2,700 ವಲಸಿಗರನ್ನು ಸ್ವೀಕರಿಸಲು ಸಜ್ಜಾಗಿವೆ.

ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಮೂರು ಹಡಗುಗಳು ಮಂಗಳವಾರ ಮಾಲ್ಡೀವ್ಸ್ ಮತ್ತು ಯುಎಇಗೆ ತೆರಳಿ ಭಾರತೀಯ ನಾಗರಿಕರನ್ನು ಮರಳಿ ಕರೆತಂದವು. ಗುರುವಾರ ಅಬುಧಾಬಿಯಿಂದ ಹೊರಡುವ ಮೂರು ವಿಮಾನಗಳಲ್ಲಿ 200 ಪ್ರಯಾಣಿಕ ರಾತ್ರಿ 9.45ಕ್ಕೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.

ಟಿಕೆಟ್ ಪಡೆದ ಅಬುದಾಬಿಯ ಪ್ರಯಾಣಿಕ ಜಿಶ್ನು ಅವರು, ತವರು ರಾಜ್ಯಕ್ಕೆ ಮರಳುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ಟಿಕೆಟ್ ಪಡೆದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಪ್ರಯಾಣಿಸಬಹುದೆಂದು ನಿನ್ನೆ ನನಗೆ ತಿಳಿಸಿದರು" ಎಂದು ದೂರದರ್ಶನ ಚಾನೆಲ್‌​ಗೆ ತಿಳಿಸಿದರು.

ಗುರುವಾರದ ಕೊಚ್ಚಿ-ದೋಹಾ ವಿಮಾನವನ್ನು ಶನಿವಾರಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಸಿಯಾಲ್ ಮೂಲಗಳು ತಿಳಿಸಿವೆ. ತಲಾ 200 ಪ್ರಯಾಣಿಕರೊಂದಿಗೆ ಎರಡು ವಿಮಾನಗಳು ಗುರುವಾರ ದುಬೈ ಮತ್ತು ರಿಯಾದ್‌ನಿಂದ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯಲಿವೆ. ಮೇ 9ರಂದು ತಿರುವನಂತಪುರಂನಲ್ಲಿ 10 ಮತ್ತು ಕತಾರ್‌ನ ದೋಹಾದಿಂದ ತಲಾ 200 ಪ್ರಯಾಣಿಕರೊಂದಿಗೆ 10 ವಿಮಾನಗಳು ಬರುವ ನಿರೀಕ್ಷಿ ಇದೆ ಎಂದು ತಿರುವನಂತಪುರಂ ವಿಮಾನ ನಿಲ್ದಾಣದ ನಿರ್ದೇಶಕ ಸಿ.ವಿ.ರವೀದ್ರನಾಥ್ ತಿಳಿಸಿದ್ದಾರೆ.

ಎನ್‌ಆರ್‌ಕೆಗಳನ್ನು ಸ್ವೀಕರಿಸಲು ಕೇರಳದ ಕೊಚ್ಚಿ, ಕೋಯಿಕೋಡ್ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ತಿರುವನಂತಪುರಂಗೆ ಆಗಮಿಸುವವರಿಗೆ 11,200ಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಕಲ್ಪಿಸಲು 6 ತಾಲೂಕುಗಳಲ್ಲಿ ಸಂಪರ್ಕ ತಡೆ ಕಲ್ಪಿಸಲಾಗಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇನ್ನೂ 6,400 ಜನರಿಗೆ ಹೋಟೆಲ್ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದು ಅವರೇ ಪಾವತಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details