ನವದೆಹಲಿ:ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ಭಾರತದ ಆರ್ಥಿಕತೆಯು ಶೇ 9.6ರಷ್ಟು ಕುಗ್ಗಿದೆ ಎಂದು ಅಂದಾಜಿಸಲಾಗಿದೆ.
ಕೋವಿಡ್-19 ಬಿಕ್ಕಟ್ಟು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಕಾರ್ಮಿಕ ಮಾರುಕಟ್ಟೆಗಳು ತೀವ್ರ ಹಾನಿಗೊಳಗಾಗಿವೆ. ಭಾರತದಲ್ಲಿ 2020ರ ಮಧ್ಯಭಾಗದಲ್ಲಿ ನಿರುದ್ಯೋಗ ದರ ದಾಖಲೆಯ ಗರಿಷ್ಠ ಶೇ 23ಕ್ಕೆ ಏರಿಕೆಯಾಗಿತ್ತು ಎಂದು ಜಾಗತಿಕ ಆರ್ಥಿಕ ಸ್ಥಿತಿ ಮತ್ತು ಮುನ್ನೋಟ 2021ರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಂಕ್ರಾಮಿಕ ರೋಗವು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ ಸೇವಾ ಕ್ಷೇತ್ರದಲ್ಲಿನ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರಿದೆ. ವಾಣಿಜ್ಯ ವಾಯುಯಾನ, ಪ್ರವಾಸೋದ್ಯಮ, ಕ್ಯಾಟರಿಂಗ್, ವಿಶ್ರಾಂತಿ, ಪರ್ಸನಲ್ ಕೇರ್, ಚಿಲ್ಲರೆ ಕೈಗಾರಿಕೆಗಳು, ಉತ್ಪಾದನೆ, ವ್ಯಾಪಾರ ಮತ್ತು ಸಾರಿಗೆಯಂತಹ ಕ್ಷೇತ್ರಗಳು ಕನಿಷ್ಠ ಪ್ರಮಾಣದಲ್ಲಿ ಕಡಿಮೆ ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳುತ್ತದೆ. ಇದು ಅತಿದೊಡ್ಡ ಉದ್ಯೋಗ ನಷ್ಟ ಎದುರಿಸುತ್ತಿದೆ ಎಂದು ಹೇಳಿದೆ.