ನವದೆಹಲಿ: ದಿ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ವಿಶ್ವದ 84ನೇ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಎಂಬ ಹೆಗ್ಗಳಿಕೆ ಪಡೆದಿದೆ.
ಭಾರತೀಯ ಪಾಸ್ಪೋರ್ಟ್ದಾರರು ವೀಸಾ ಪಡೆಯುವ ಚಿಂತಿಸುವ ಮೊದಲೇ ಜಗತ್ತಿನ 50ಕ್ಕೂ ಹೆಚ್ಚು ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದು. ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳ ಹಿಂದೆ ಇದ್ದರೂ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನದಂತಹ ನೆರೆಹೊರೆಯವರಿಗಿಂತ ಭಾರತೀಯ ಪಾಸ್‌ಪೋರ್ಟ್ ಹೆಚ್ಚು ಶಕ್ತಿಶಾಲಿಯಾಗಿದೆ.
ಪಾಸ್‌ಪೋರ್ಟ್ ಶ್ರೇಯಾಂಕದ ಪ್ರಕಾರ, ಏಷ್ಯಾ, ಯುರೋಪ್, ಆಫ್ರಿಕಾ, ಮಧ್ಯಪ್ರಾಚ್ಯ, ಒಸೆನಿಯಾ ಮತ್ತು ಕೆರಿಬಿಯನ್ ದೇಶಗಳ 58 ಸ್ಥಳಗಳಿಗೆ ಭಾರತೀಯ ಪಾಸ್‌ಪೋರ್ಟ್ ವೀಸಾ ಮುಕ್ತ ಪ್ರವೇಶ ಸ್ಥಾನ ಪಡೆದಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈ ಪ್ರದೇಶಗಳಿಗೆ ವೀಸಾ ಅಗತ್ಯವಿಲ್ಲದ ಪ್ರವೇಶಿಸಬಹುದು.
ಪ್ರವಾಸಿ ತಾಣಗಳಿಗೆ ವೀಸಾ ಮುಕ್ತ ಪ್ರವೇಶವು ಪ್ರಯಾಣವನ್ನು ಅಗ್ಗವಾಗಿಸುದರ ಜೊತೆಗೆ ಟ್ರಾವೆಲ್ ಏಜೆಂಟರ ಹಿಂದೆ ಓಡಾಡುವುದು ಅಥವಾ ವೀಸಾಕ್ಕೆ ಅರ್ಜಿ ಸಲ್ಲಿಸಲು ದೂತವಾಸದ ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲವುದು ಅಗತ್ಯವಿರುವುದಿಲ್ಲ. ವೀಸಾ ಇಲ್ಲದೆ ಸುಲಭವಾಗಿ ಪ್ರವೇಶ ಪಡೆಯಬಹುದಾದ ರಾಷ್ಟ್ರಗಳು ಈ ಕೆಳಗಿನಂತಿವೆ.
('ವಿಸಾ ಆನ್ ಅರೈವಲ್'; ದೇಶಕ್ಕೆ ಭೇಟಿ ನೀಡಿದ ಬಳಿಕ ವಿಸಾ ಪಡೆಯುವ ಅವಕಾಶ)
ಏಷ್ಯಾ
ಭೂತಾನ್
ಕಾಂಬೋಡಿಯಾ(ವಿಸಾ ಆನ್ ಅರೈವಲ್)
ಇಂಡೋನೇಷ್ಯಾ
ಲಾವೋಸ್ (ವಿಸಾ ಆನ್ ಅರೈವಲ್)
ಮಕಾವೊ (ವಿಸಾ ಆನ್ ಅರೈವಲ್)
ಮಾಲ್ಡೀವ್ಸ್ (ವಿಸಾ ಆನ್ ಅರೈವಲ್)
ಮ್ಯಾನ್ಮಾರ್ (ವಿಸಾ ಆನ್ ಅರೈವಲ್)
ನೇಪಾಳ
ಶ್ರೀಲಂಕಾ (ವಿಸಾ ಆನ್ ಅರೈವಲ್)
ಥೈಲ್ಯಾಂಡ್ (ವಿಸಾ ಆನ್ ಅರೈವಲ್)
ಟಿಮೋರ್- ಲೆಸ್ಟೆ (ವಿಸಾ ಆನ್ ಅರೈವಲ್)