ನವದೆಹಲಿ:ಲಸಿಕೆ ಅಭಿವೃದ್ಧಿ ಪ್ರಯತ್ನಗಳು ಬಹುತೇಕ ಫಲಪ್ರದವಾಗುತ್ತಿದ್ದು, ಮುಂದಿನ ಕೆಲವು ವಾರಗಳಲ್ಲಿ ಅಥವಾ ತಿಂಗಳಲ್ಲಿ ಭಾರತವು ಅನೇಕ ಲಸಿಕೆ ಹೊಂದಲು ಸಿದ್ಧವಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಭಾರತವನ್ನು 'ವಿಶ್ವದ ಔಷಧಾಲಯ' ಎಂದು ಕರೆಯಲಾಗುತ್ತದೆ. ನಿರ್ಣಾಯಕ ಹಂತದಲ್ಲಿ ಜೀವ ಉಳಿಸುವ ಔಷಧಿಗಳನ್ನು ವಿಶ್ವದ ಇತರ ಭಾಗಗಳಿಗೆ ಉತ್ಪಾದಿಸಿ ರಫ್ತು ಮಾಡುವುದನ್ನು ಭಾರತ ಮುಂದುವರೆಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಇದು ನಿಜವೆಂಬುದು ಸಾಬೀತಾಗಿದೆ ಎಂದರು.
ಇದನ್ನು ಓದಿ: ಚೀನಾಗೆ ಬುದ್ಧಿ ಕಲಿಸಿದ ಭಾರತೀಯರು: ಡ್ರ್ಯಾಗನ್ ಕಂಪನಿಗಳ ಮೊಬೈಲ್ ಮಾರಾಟ ಕುಸಿತ... ಹಾಗಿದ್ರೆ ನಂ.1 ಯಾರು?
ಕೈಗಾರಿಕಾ ಸಂಸ್ಥೆ ಒಪಿಪಿಐನ ವಾರ್ಷಿಕ ಶೃಂಗಸಭೆ 2020 ಉದ್ಘಾಟಸಿ ಮಾತನಾಡಿದ ಅವರು, ಜಾಗತಿಕ ಮತ್ತು ಭಾರತೀಯ ಕಂಪನಿಗಳು ಜೊತೆಯಾಗಿ ಹೆಜ್ಜೆ ಹಾಕಿ ದೇಶದ ಆರೋಗ್ಯ ಸೇವೆಯ ಪ್ರಯತ್ನಗಳನ್ನು ಚುರುಕುಗೊಳಿಸಲಾಗಿದೆ. ಈ ಸಾಂಕ್ರಾಮಿಕ ವರ್ಷದಲ್ಲಿ ಭಾರತೀಯ ಔಷಧೀಯ ಕ್ಷೇತ್ರದ ಕೊಡುಗೆಯನ್ನು ಬಲಪಡಿಸಲಾಗಿದೆ ಎಂದು ಹೇಳಿದರು.
ಉದ್ಯಮದ ಎಲ್ಲಾ ಘಟಕಗಳು, ಜಾಗತಿಕ ಮತ್ತು ಭಾರತೀಯ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಸರ್ಕಾರಿ ನಿಯಂತ್ರಕರು ಮತ್ತು ಲಸಿಕೆ ಅಭಿವೃದ್ಧಿಗೆ ಸಹಕರಿಸಿದ ಆಸ್ಪತ್ರೆಗಳ ನಡೆ ಶ್ಲಾಘನೀಯವಾಗಿದೆ ಎಂದರು.