ನವದೆಹಲಿ: ಇ-ಸಿಗರೆಟ್ ನಿಷೇಧವನ್ನು ಜಾರಿಗೆ ತರಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ.
ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರುಗಳಿಗೆ (ಡಿಜಿಪಿ) ಬರೆದಿರುವ ಪತ್ರದಲ್ಲಿ ಗೃಹ ಸಚಿವಾಲಯವು, ಸಬ್ ಇನ್ಸ್‌ಪೆಕ್ಟರ್ ಹುದ್ದೆ ಮೇಲಿರುವ ಮತ್ತು ಇತರ ಅಧಿಕಾರಿಗಳಿಗಿಂತ ಹೆಚ್ಚಿನ ಅಧಿಕಾರ ಹೊಂದಿರುವವರು ವಾರೆಂಟ್ ಇಲ್ಲದೆಯೇ ನಿಷೇಧಿತ ವಸ್ತುವನ್ನು ಪತ್ತೆಹಚ್ಚುವ ಮತ್ತು ವಶಪಡಿಸಿಕೊಳ್ಳವು ಅಧಿಕಾರ ನೀಡಲಾಗಿದೆ ಎಂದು ಹೇಳಿದೆ.