ನವದೆಹಲಿ :ಕೃಷಿ, ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳಲ್ಲಿನ ಚೇತರಿಕೆಯು 'ಹಸಿರು ವಲಯ'ದತ್ತ ಸಾಗಿವೆ. ಸರ್ಕಾರ ಮತ್ತು ಆರ್‌ಬಿಐ ತೆಗೆದುಕೊಂಡ ತ್ವರಿತ ನೀತಿ ಕ್ರಮಗಳು ಕನಿಷ್ಠ ಹಾನಿಯೊಂದಿಗೆ ಆರ್ಥಿಕತೆ ಪುನರುಜ್ಜೀವನಗೊಳಿಸಲು ನೆರವಾಗಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಕೃಷಿ ಕ್ಷೇತ್ರವು ಈಗಲೂ ಭಾರತೀಯ ಆರ್ಥಿಕತೆಯ ಅಡಿಪಾಯವಾಗಿ ಉಳಿದಿದೆ. ನಿರೀಕ್ಷೆಯಂತೆ ಸಾಮಾನ್ಯ ಮಾನ್ಸೂನ್ ಆರ್ಥಿಕತೆ ಮೇಲೇಳಲು ಬೆಂಬಲಿಸಬೇಕಿದೆ ಎಂದಿದೆ.
ಸರ್ಕಾರ, ಆರ್‌ಬಿಐನ ನೀತಿಗಳು ಆರ್ಥಿಕತೆಯ ಗರಿಷ್ಠ ಹಾನಿ ತಪ್ಪಿಸಿವೆ.. ವಿತ್ತ ಸಚಿವಾಲಯ - ಭಾರತದ ಜಿಡಿಪಿ
ಸರ್ಕಾರ ಮತ್ತು ಆರ್‌ಬಿಐ ಹಾನಿಗಳಗಾದ ಆರ್ಥಿಕತೆಯ ತ್ವರಿತವಾಗಿ ಪುನರುಜ್ಜೀವನಗೊಳಿಸಲು ನಿರ್ಣಾಯಕ ರೀತಿಯಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿಯ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ರಚನಾತ್ಮಕ ಸುಧಾರಣೆಗಳು ಮತ್ತು ಸಾಮಾಜಿಕ ಕಲ್ಯಾಣದ ಯೋಜನೆಗಳು ಆರ್ಥಿಕ ಚೇತರಿಕೆಗೆ ನೆರವಾಗಿವೆ ಎಂದು ವಿತ್ತ ಸಚಿವಾಲಯ ವ್ಯಾಖ್ಯಾನಿಸಿದೆ..
ಈ ಕ್ಷೇತ್ರದ ಜಿಡಿಪಿ ಕೊಡುಗೆ ತುಂಬಾ ದೊಡ್ಡದಲ್ಲದಿದ್ದರೂ ಅದರ ಬೆಳವಣಿಗೆಯು ಕೃಷಿಯನ್ನು ಅವಲಂಬಿಸಿರುವ ದೊಡ್ಡ ಜನಸಂಖ್ಯೆಯ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕ್ಷೇತ್ರದಲ್ಲಿ ಇತ್ತೀಚೆಗೆ ಘೋಷಿಸಲಾದ ಮಹತ್ವದ ಸುಧಾರಣೆಗಳು ದಕ್ಷ ಮೌಲ್ಯದ ಸರಪಳಿ ನಿರ್ಮಿಸುವಲ್ಲಿ ಮತ್ತು ರೈತರಿಗೆ ಉತ್ತಮ ಆದಾಯ ಖಚಿತಪಡಿಸುತ್ತವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ಥಿಕ ಪುನರುಜ್ಜೀವನದ ಆರಂಭಿಕ ಹಸಿರಿನ ಚಿಗುರುಗಳು ಮೇ ಮತ್ತು ಜೂನ್‌ನಲ್ಲಿ ಕಾಣಿಸಿವೆ. ವಿದ್ಯುತ್ ಮತ್ತು ಇಂಧನದ ಬಳಕೆ, ಸರಕುಗಳ ಅಂತರ ರಾಜ್ಯ ಸಾಗಣೆ, ಚಿಲ್ಲರೆ ಹಣಕಾಸು ವಹಿವಾಟುಗಳಿನ ಚಟುವಟಿಕೆಗಳು ಸಕರಾತ್ಮಕವಾಗಿ ಹೊರಹೊಮ್ಮಿವೆ. ಎರಡು ತಿಂಗಳ ಒಳಗೆ ಪಿಪಿಇ ಕಿಟ್ಗಳ ಉತ್ಪಾದನಾ ಕ್ಷೇತ್ರದಲ್ಲಿ ಸ್ಥಿತಿಸ್ಥಾಪಕತ್ವ ಕಂಡು ಬಂದಿದೆ ಎಂದು ವಿವರಿಸಿದೆ.