ನವದೆಹಲಿ:ನೇರ ತೆರಿಗೆ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸುವ 'ವಿವಾದ್ ಸೆ ವಿಶ್ವಾಸ್' ಮಸೂದೆ-2020ರ ಉತ್ತಮ ಅನುಷ್ಠಾನಕ್ಕಾಗಿ ಮಧ್ಯಸ್ಥಗಾರರು ತಮ್ಮ ಸಲಹೆಗಳನ್ನು ಮುಕ್ತವಾಗಿ ಸರ್ಕಾರದ ಜತೆ ಹಂಚಿಕೊಳ್ಳಬಹುದು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ಪಿಸಿ ಮೋಡಿ ಹೇಳಿದ್ದಾರೆ.
ವಿವಾದ್ ಸೆ ವಿಶ್ವಾಸ್ ಮಸೂದೆ ಯಶಸ್ವಿಗೆ ಮುಕ್ತವಾಗಿ ಸಲಹೆ ನೀಡಿ.. ಸಿಬಿಡಿಟಿ ಮನವಿ - ತೆರಿಗೆ
ಮೇಲ್ಮನವಿ ಆಯುಕ್ತರು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ), ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ವೇದಿಕೆಗಳ ಮುಂದೆ 4.8 ಲಕ್ಷಕ್ಕೂ ಹೆಚ್ಚು ನೇರ ತೆರಿಗೆ ವಿವಾದಗಳು ಬಾಕಿ ಉಳಿದಿವೆ. ಈ ಪ್ರಕರಣಗಳಲ್ಲಿ ಸುಮಾರು 9 ಲಕ್ಷ ಕೋಟಿ ರೂಪಾಯಿ ಸಿಲುಕಿಕೊಂಡಿದ್ದು, ಈ ಯೋಜನೆಯ ಮೂಲಕ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮರುಸಂಗ್ರಹಿಸುವ ಉದ್ದೇಶದಿ ಈ ಕಾಯ್ದೆಜಾರಿಗೆ ತಂದಿದೆ.
ಮೇಲ್ಮನವಿ ಆಯುಕ್ತರು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ), ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ವೇದಿಕೆಗಳ ಮುಂದೆ 4.8 ಲಕ್ಷಕ್ಕೂ ಹೆಚ್ಚು ನೇರ ತೆರಿಗೆ ವಿವಾದಗಳು ಬಾಕಿ ಉಳಿದಿವೆ. ಈ ಪ್ರಕರಣಗಳಲ್ಲಿ ಸುಮಾರು 9 ಲಕ್ಷ ಕೋಟಿ ರೂಪಾಯಿ ಸಿಲುಕಿಕೊಂಡಿದೆ. ಈ ಯೋಜನೆಯ ಮೂಲಕ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣ ಮರು ಸಂಗ್ರಹಿಸುವ ಉದ್ದೇಶದಿಂದ ಈ ಕಾಯ್ದೆ ಜಾರಿಗೆ ತಂದಿದೆ.
ವಿವಾದ್ ಸೆ ವಿಶ್ವಾಸ್ ಯೋಜನೆ ಕುರಿತು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ) ಆಯೋಜಿಸಿದ್ದ ವಿಡಿಯೋ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋಡಿ, ಯಾವುದೇ ಯೋಜನೆಯನ್ನು ಎಲ್ಲಾ ಪರಿಪೂರ್ಣತೆಗಳೊಂದಿಗೆ ಜಾರಿಗೆ ತರಲು ಆಗುವುದಿಲ್ಲ. ಈ ಯೋಜನೆ ಸಹ ಹೊರತಾಗಿಲ್ಲ. ಸರ್ಕಾರ ಮತ್ತು ಮಂಡಳಿಯು ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಪ್ರತಿ ಮಧ್ಯಸ್ಥಗಾರರಿಂದ ಸಲಹೆ ಮತ್ತು ಕಾಮೆಂಟ್‌ಗಳನ್ನ ಮುಕ್ತವಾಗಿ ಸ್ವೀಕರಿಸಬೇಕು ಎಂದು ಹೇಳಿದರು.