ನವದೆಹಲಿ: ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಪ್ರಾವಿಡೆಂಟ್ ಫಂಡ್ (ಪಿಎಫ್) ಮೇಲಿನ ಬಡ್ಡಿ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಗರಿಷ್ಠ 5 ಲಕ್ಷ ರೂ.ಗೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಇತ್ತೀಚಿನ ಬಜೆಟ್ ಭಾಷಣದಲ್ಲಿ ಪಿಎಫ್ ಖಾತೆಗೆ ಗಳಿಸಿದ ಬಡ್ಡಿಗೆ ವರ್ಷಕ್ಕೆ 2.50 ಲಕ್ಷ ರೂ. ಮೀರಿದರೆ ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದ್ದರು.
ಇದು ಮುಂದಿನ ತಿಂಗಳು ಒಂದನೇ ತಾರಿಖಿನಿಂದ ಜಾರಿಗೆ ಬರಲಿದೆ. ಪಿಎಫ್ ಮಿತಿಯನ್ನು ಉಲ್ಲೇಖಿಸಿ ಹಣಕಾಸು ಮಸೂದೆ ಕುರಿತು ಮಂಗಳವಾರ ಲೋಕಸಭೆಯಲ್ಲಿ ನಡೆದ ಚರ್ಚೆಗೆ ನಿರ್ಮಲಾ ಪ್ರತಿಕ್ರಿಯಿಸಿದರು. ಕಾನೂನಿನ ಪ್ರಕಾರ, ಉದ್ಯೋಗದಾತನು ಪಿಎಫ್‌ನಲ್ಲಿ ತನ್ನ ಪಾಲಿನಂತೆ ನೌಕರಿಯ ಮೂಲ ವೇತನದ ಶೇ 12ರವರೆಗೆ ಕೊಡುಗೆ ನೀಡುತ್ತಾನೆ. ಮಾಲೀಕರು ಈ ಮೊತ್ತಕ್ಕಿಂತ ಹೆಚ್ಚಿನದನ್ನು ಪಿಎಫ್‌ನಲ್ಲಿ ಠೇವಣಿ ಇಟ್ಟರೆ, ಆ ಮೊತ್ತವನ್ನು ಇತ್ತೀಚಿನ ಮಿತಿಯ 5 ಲಕ್ಷ ರೂ.ಗೆ ಘೋಷಿಸಲಾಗುತ್ತೆ. ಅಂದರೆ, ಮಾಲೀಕರು ತಮ್ಮ ಪಾಲುಗಿಂತ ಹೆಚ್ಚಿನದನ್ನು ಚಂದಾದಾರರ ಪಿಎಫ್ ಖಾತೆಗೆ ಜಮಾ ಮಾಡದ ಹೊರತು ನಾವು ಪಿಎಫ್ ಠೇವಣಿಗಳ ಮೇಲಿನ ಬಡ್ಡಿ ಮೇಲಿನ ತೆರಿಗೆಯನ್ನು ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ಕಡಿತಗೊಳಿಸುತ್ತೇವೆ. ಪಿಎಫ್ ಅನ್ನು ವಾರ್ಷಿಕ 2.50 ಲಕ್ಷ ರೂ.ಗಿಂತ ಕಡಿಮೆ ಠೇವಣಿ ಇಡುವವರು ಶೇ 92-93ರಷ್ಟರವರೆಗೆ ಲಭ್ಯವಾಗಿ, ತೆರಿಗೆ ಮುಕ್ತ ಬಡ್ಡಿ ಪಡೆಯುತ್ತಾರೆ ಎಂದರು.