ಕರ್ನಾಟಕ

karnataka

ETV Bharat / business

ಹಾನಿ ಲೆಕ್ಕಾಚಾರದ ಫೀಲ್ಡಿಗಿಳಿದ 'ಕೋವಿಡ್-19 ಟಾಸ್ಕ್​ಫೋರ್ಸ್... ಅಂತಿಮ​ ವರದಿಯಲ್ಲಿ ಏನಿರಲಿದೆ? - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಜಿಎಸ್‌ಟಿ ಮಂಡಳಿಯ ತೆರಿಗೆ ಸ್ಲ್ಯಾಬ್​ ಇಳಿಕೆ, ಎಂಎಸ್‌ಎಂಇಗಳಿಗಾಗಿ ಎನ್‌ಪಿಎ ಘೋಷಣೆ ಮತ್ತು ಆರ್‌ಬಿಐ ಸಾಲಗಳ ಮರು ವರ್ಗೀಕರಣದ ಮೇಲೆ ನಿಷೇಧವನ್ನು ವಿಸ್ತರಿಸುವ ಸಾಧ್ಯತೆಯೂ ಇದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಕುಸಿದರೂ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ. ಇದರಿಂದ ಬಂದ ನಿಧಿಯನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ.

FM Nirmala Sitharaman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

By

Published : Mar 20, 2020, 10:54 PM IST

ನವದೆಹಲಿ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಕೊರೊನಾ ವೈರಸ್​ನಿಂದ ಉಂಟಾಗಿರುವ ಹಾನಿಯನ್ನು ಅಂದಾಜಿಸಲು ಆರ್ಥಿಕ ಪ್ರತಿಕ್ರಿಯೆ ಕಾರ್ಯಪಡೆ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು.

ಈ ತಂಡವು ಮುಂದಿನ ವಾರಗಳಲ್ಲಿ ಪ್ರವಾಸೋದ್ಯಮ, ಆತಿಥ್ಯ (ಹಾಸ್ಪಿಟಾಲಿಟಿ), ವಾಯುಯಾನ ಮತ್ತು ಎಂಎಸ್‌ಎಂಇ ಸೇರಿದಂತೆ ಕೋವಿಡ್ 19 ಪೀಡಿತ ಕ್ಷೇತ್ರಗಳಿಗೆ ಉತ್ತೇಜನ ಪ್ಯಾಕೇಜ್ ಅನ್ನು ಘೋಷಿಸುವ ಸಾಧ್ಯತೆ ಇದೆ.

ಜಿಎಸ್‌ಟಿ ಮಂಡಳಿಯ ತೆರಿಗೆ ಸ್ಲ್ಯಾಬ್​ ಇಳಿಕೆ, ಎಂಎಸ್‌ಎಂಇಗಳಿಗಾಗಿ ಎನ್‌ಪಿಎ ಘೋಷಣೆ ಮತ್ತು ಆರ್‌ಬಿಐ ಸಾಲಗಳ ಮರು ವರ್ಗೀಕರಣದ ಮೇಲೆ ನಿಷೇಧವನ್ನು ವಿಸ್ತರಿಸುವ ಸಾಧ್ಯತೆಯೂ ಇದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಕುಸಿದರೂ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ. ಇದರಿಂದ ಬಂದ ನಿಧಿಯನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ.

ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಇನ್ನೂ ರಚನೆಯಾಗದ ಕಾರ್ಯಪಡೆಯಲ್ಲಿ ಈ ತಕ್ಷಣದ ಸದಸ್ಯರಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ, ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಪಶುಸಂಗೋಪನಾ ಸಚಿವ ಗಿರಿರಾಜ್ ಸಿಂಗ್ ಅವರನ್ನು ಒಳಗೊಂಡಿದೆ.

ವೈರಸ್ ಪ್ರಭಾವದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹಣಕಾಸು ಸಚಿವರು ಮತ್ತು ಹಣಕಾಸು ಕಾರ್ಯದರ್ಶಿಗಳು ಶುಕ್ರವಾರ ಸಚಿವರುಗಳನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ.

ಕಾರ್ಯಪಡೆ ಮುಂದಿನ ವಾರಗಳಲ್ಲಿ ವೈರಸ್ ಪೀಡಿತ ಆರ್ಥಿಕತೆಯ ಎಲ್ಲ ಇತರ ಪ್ರಮುಖ ಕ್ಷೇತ್ರಗಳಿಂದ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತದೆ. ಈ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದನ್ನು ತಡೆಯಲು ಪ್ಯಾಕೇಜ್ ಅನ್ನು ಘೋಷಿಸಲಿದೆ.

'ಭಾರತವು ಪ್ರಸ್ತುತ ಸಾಂಕ್ರಾಮಿಕ ರೋಗದ ಎರಡನೇ ಹಂತದಲ್ಲಿದೆ. ಮೂರನೇ ಹಂತ ಇನ್ನೂ ಬರಬೇಕಾಗಿರುವುದರಿಂದ ಮುಂಬರುವ ವಾರಗಳಲ್ಲಿ ದೇಶವು ಕಠಿಣ ಕ್ರಮಗಳಿಗೆ ಸಿದ್ಧರಾಗಿರಬೇಕು' ಎಂದು ಪ್ರಧಾನಿ ಮೋದಿ ಗುರುವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದರು.

ಸಾಂಕ್ರಾಮಿಕ ರೋಗ ಕೋವಿಡ್ -19ನಿಂದ ಉಂಟಾಗುವ ದುಷ್ಪರಿಣಾಮವು ಭಾರತದ ಆರ್ಥಿಕತೆಯನ್ನು ಕುಸಿಯುವಂತೆ ಮಾಡಿದೆ. ಚೀನಾದ ಪೂರೈಕೆ ಸರಪಳಿಯನ್ನು ಮೊಟಕುಗೊಳಿಸಿದೆ. ಮಾಲ್‌, ರೆಸ್ಟೋರೆಂಟ್‌ ಮತ್ತು ಚಿಲ್ಲರೆ ಅಂಗಡಿಗಳು ಮುಚ್ಚಿದ್ದು, ಪ್ರವಾಸೋದ್ಯಮವೇ ಸ್ಥಗಿತಗೊಂಡಿದೆ. ನಿಧಾನಗತಿಯ ಆರ್ಥಿಕತೆಯ ಮಧ್ಯದಲ್ಲಿನ ಈ ಬೆಳವಣಿಗೆಯು ವೃದ್ಧಿಯ ದರ ಶೇ 5.5ಕ್ಕಿಂತ ಕಡಿಮೆ ಇದೆ ಎಂದು ಅಂದಾಜಿಸಲಾಗಿದೆ.

ಕೋವಿಡ್ 19 ಪ್ರಭಾವದಿಂದ ಎಲ್ಲಾ ಪ್ರಮುಖ ಆರ್ಥಿಕತೆಗಳು ಆರ್ಥಿಕ ಹಿಂಜರಿತಕ್ಕೆ ತುತ್ತಾಗುವ ನಿರೀಕ್ಷೆಯಿದೆ. ಆದರೆ, ಭಾರತವು 2020ರ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ 5ಕ್ಕಿಂತ ಹೆಚ್ಚಿಲ್ಲ ಎಂದು ಕ್ರಿಸ್ಸಿಲ್ ಹೇಳಿದೆ.

ಐಎಲ್ಒ ಪ್ರಕಾರ, ಕೋವಿಡ್ -19ರ ಕಾರಣದಿಂದಾಗಿ 25 ಮಿಲಿಯನ್ ಉದ್ಯೋಗ ನಷ್ಟವನ್ನು ಜಗತ್ತು ಎದುರಿಸಲು ಸಿದ್ಧವಾಗಬೇಕು. ಅಮೆರಿಕ, ಇಂಗ್ಲೆಂಡ್​, ಸ್ಪೇನ್, ಜರ್ಮನಿ, ಆಸ್ಟ್ರೇಲಿಯಾ, ಸಿಂಗಾಪುರ್, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಎಲ್ಲಾ ಪ್ರಮುಖ ಆರ್ಥಿಕತೆಗಳು ಕೋವಿಡ್ 19 ಸಾಂಕ್ರಾಮಿಕ ರೋಗದ ದುಷ್ಪರಿಣಾಮವನ್ನು ಪರಿಗಣಿಸಿ ಈಗಾಗಲೇ ಪ್ಯಾಕೇಜ್ ಅನ್ನು ಘೋಷಿಸಿವೆ.

ABOUT THE AUTHOR

...view details