ನವದೆಹಲಿ:2047ರ ವೇಳೆಗೆ ದೆಹಲಿಗರ ತಲಾ ಆದಾಯವನ್ನು ಸಿಂಗಾಪುರದ ತಲಾ ಆದಾಯಕ್ಕೆ ಸಮನಾಗಿ ಮಾಡುವ ಗುರಿ ಹೊಂದಿದ್ದೇವೆ. ಈ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಆದಾಯದಲ್ಲಿ ಶೇ 16ರಷ್ಟು ಬೆಳವಣಿಗೆ ಅಗತ್ಯವಾಗಿದೆ. ಇದು ಕಷ್ಟಕರವಾಗಿರುತ್ತದೆ. ಆದರೆ, ಅದನ್ನು ಯಶಸ್ವಿಯಾಗಿಸಲು ನಾವು ಕೆಲಸ ಮಾಡುತ್ತೇವೆ ದೆಹಲಿ ಡೆಪ್ಯುಟಿ ಸಿಎಂ ಹಾಗೂ ಹಣಕಾಸು ಸಚಿವ ಸಿಎಂ ಮನೀಷಾ ಸಿಸೋಡಿಯಾ ಹೇಳಿದ್ದಾರೆ.
ಸಿಸೋಡಿಯಾ ಅವರು 2020-21ರ ಆರ್ಥಿಕ ವರ್ಷದ ವಾರ್ಷಿಕ ಬಜೆಟ್ ಅನ್ನು ಮಂಗಳವಾರ 69,000 ಕೋಟಿ ರೂ. ಬಜೆಟ್ ಮಂಡಿಸಿದರು. ಇದು ಇಲ್ಲಿಯವರೆಗಿನ ಗರಿಷ್ಠ ಮೊತ್ತದ ಆಯವ್ಯಯವಾಗಿದೆ. ದೇಶಪ್ರೇಮದ ಆಧಾರದ ಮೇಲೆ ದೆಹಲಿ ಸರ್ಕಾರವು ಬಿ.ಆರ್.ಅಂಬೇಡ್ಕರ್ ಅವರ ಲೈವ್ ಕಾರ್ಯಕ್ರಮಗಳಿಗೆ ₹ 10 ಕೋಟಿ ವಿನಿಯೋಗಿಸಲಿದ್ದು, 75 ವಾರಗಳ ಕಾಲ ‘ದೇಶಭಕ್ತಿ’ ಕಾರ್ಯಕ್ರಮ ಆಚರಿಸಲಾಗುವುದು. ಭಗತ್ ಸಿಂಗ್ ಅವರ ಜೀವನದ ಕಾರ್ಯಕ್ರಮಗಳಿಗಾಗಿ ₹ 10 ಕೋಟಿ ಹಂಚಿಕೆ ಮಾಡಲಾಗುವುದು ಎಂದರು.
ಇದನ್ನೂ ಓದಿ: ಜಿಎಸ್ಟಿ ನಷ್ಟ ಪರಿಹಾರ: ಕೇಂದ್ರದ 1.06 ಲಕ್ಷ ಕೋಟಿ ರೂ.ಯಲ್ಲಿ ರಾಜ್ಯಕ್ಕೆ ಸಿಕ್ಕಿದೆಷ್ಟು?
ಕೋವಿಡ್ -19 ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೆಹಲಿಯವರಿಗೆ ಉಚಿತವಾಗಿ ಮುಂದುವರಿಯುತ್ತದೆ. ವ್ಯಾಕ್ಸಿನೇಷನ್ ಡ್ರೈವ್‌ಗೆ ಸಿಸೋಡಿಯಾ 50 ಕೋಟಿ ರೂ. ಮೀಸಲಿಟ್ಟಿದ್ದು, ದೆಹಲಿಯು ದಿನಕ್ಕೆ 45,000 ಜನರಿಗೆ ಲಸಿಕೆ ಹಾಕುವ ಸಾಮರ್ಥ್ಯವಿದೆ. ಇದನ್ನು ಶೀಘ್ರದಲ್ಲೇ 60,000 ಜನರಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಪ್ರಮುಖ ಪ್ರಮುಖಾಂಶಗಳು