ಕರ್ನಾಟಕ

karnataka

ETV Bharat / business

ಹಿಂಬದಿ ಬೈಕ್ ಸವಾರರಿಗೆ ಹೆಲ್ಮೆಟ್​ ಕಡ್ಡಾಯದಂತೆ ಮುಂಬದಿ ಕಾರು ಸವಾರರಿಗೂ ಬರಲಿದೆ ಹೊಸ ರೂಲ್ಸ್! - ಕಾರ್ ಏರ್ ಬ್ಯಾಗ್​ ಕಡ್ಡಾಯ

ಸಾರಿಗೆ ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, 2021ರ ಏಪ್ರಿಲ್ 1ರಿಂದ ತಯಾರಾದ ಎಲ್ಲ ಹೊಸ ಮಾದರಿ ಕಾರುಗಳ ಮುಂಭಾಗದ ಆಸನಗಳ ಪ್ರಯಾಣಿಕರ ಬದಿಯಲ್ಲಿ ಏರ್​ಬ್ಯಾಗ್​ ಅಳವಡಿಕೆ ನಿಯಮ ಜಾರಿಗೆ ತರಲು ಕೇಂದ್ರ ಯೋಜಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಯೂನಿಟ್​ಗಳಿ ಹೊಸ ನಿಯಮ ಅನುಸರಿಸುವ ದಿನಾಂಕವನ್ನು 2021ರ ಜೂನ್ 1ರ ತನಕ ಎಂದು ಪ್ರಸ್ತಾಪಿಸಲಾಗಿದೆ.

cars
ಕಾರು

By

Published : Dec 29, 2020, 4:24 PM IST

Updated : Dec 29, 2020, 4:34 PM IST

ನವದೆಹಲಿ: ಎಕನಾಮಿ ಮಾಡಲ್ ಸೇರಿದಂತೆ ಎಲ್ಲ ಕಾರುಗಳಿಗೆ ಮುಂಭಾಗದ ಆಸನಗಳ ಪ್ರಯಾಣಿಕರ ಬದಿಯಲ್ಲಿ ಏರ್‌ಬ್ಯಾಗ್‌ಗಳ ಅಳವಡಿಕೆ ಕಡ್ಡಾಯಗೊಳಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಪ್ರಸ್ತಾಪಿಸಿದೆ.

ಸಾರಿಗೆ ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆ ಪ್ರಕಾರ, 2021ರ ಏಪ್ರಿಲ್ 1ರಿಂದ ತಯಾರಾದ ಎಲ್ಲ ಹೊಸ ಮಾದರಿ ಕಾರುಗಳ ಮುಂಭಾಗದ ಆಸನಗಳ ಪ್ರಯಾಣಿಕರ ಬದಿಯಲ್ಲಿ ಏರ್​ಬ್ಯಾಗ್​ ಅಳವಡಿಕೆ ನಿಯಮ ಜಾರಿಗೆ ತರಲು ಕೇಂದ್ರ ಯೋಜಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಯೂನಿಟ್​ಗಳಿ ಹೊಸ ನಿಯಮ ಅನುಸರಿಸುವ ದಿನಾಂಕವನ್ನು 2021ರ ಜೂನ್ 1ರ ತನಕ ಎಂದು ಪ್ರಸ್ತಾಪಿಸಲಾಗಿದೆ.

ಮುಂದಿನ ಒಂದು ತಿಂಗಳಲ್ಲಿ ತನ್ನ ಉದ್ದೇಶಿತ ಹೊಸ ನಿಯಮದ ಬಗ್ಗೆ ಪ್ರತಿಕ್ರಿಯಿಸಲು ಸರ್ಕಾರ ಸ್ಟೇಕ್​ಹೊಲ್ಡರ್​​ಗಳನ್ನು ಆಹ್ವಾನಿಸಿದೆ. ಈ ಹಿಂದೆ ಎಲ್ಲ ಕಾರುಗಳಲ್ಲಿ ಚಾಲಕನ ಆಸನಕ್ಕೆ ಏರ್​ಬ್ಯಾಗ್​ ಹೊಂದುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಇದು 2019ರ ಜುಲೈ 1ರಿಂದ ಜಾರಿಗೆ ಬಂದಿತ್ತು.

ಇದನ್ನೂ ಓದಿ: ಟಾಟಾ, ಮಹೀಂದ್ರಾ, ಮಾರುತಿ, ಹ್ಯುಂಡೈ ಹಾದಿ ಹಿಡಿದ ಸ್ಕೋಡಾ ಇಂಡಿಯಾ

ಸಾರಿಗೆ ಸಚಿವಾಲಯ ಹೊರಡಿಸಿದ ಕರಡು ಅಧಿಸೂಚನೆಯಲ್ಲಿ, ಹೊಸ ಮಾದರಿಗಳು 2021ರ ಏಪ್ರಿಲ್ 1ರಂದು ಮತ್ತು ಈ ನಂತರ ತಯಾರಿಸಿದ ವಾಹನಗಳು ಏರ್​ ಬ್ಯಾಗ್ ಅಳವಡಿಸಿಕೊಳ್ಳಬೇಕು. ಈಗಾಗಲೇ ಚಾಲನೆಯಲ್ಲಿ ಇರುವ ಮಾದರಿಗಳಿಗೆ 2021ರ ಜೂನ್ 1ರ ತನಕ ಅವಕಾಶ ನೀಡಲಾಗುವುದು, ಚಾಲಕನನ್ನು ಹೊರತುಪಡಿಸಿ ಮುಂಭಾಗದ ಆಸನ ಹೊಂದಿರುವ ವ್ಯಕ್ತಿಯು ಏರ್‌ಬ್ಯಾಗ್‌ ಹೊಂದಬೇಕಿದೆ ಎಂದು ಹೇಳಿದೆ.

ಪ್ರಯಾಣಿಕರ ಆಸನಕ್ಕೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಸರ್ಕಾರದ ಪ್ರಸ್ತಾವನೆಗೆ ವಾಹನ ಮಾನದಂಡಗಳ ಉನ್ನತ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿದೆ. ವಾಹನಗಳಲ್ಲಿನ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ವ್ಯವಹರಿಸುವ ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್​ಗೆ (ಎಐಎಸ್) ತಿದ್ದುಪಡಿ ತರಲು ಸರ್ಕಾರ ಕರಡು ಅಧಿಸೂಚನೆ ಮುಂದಿಟ್ಟಿದೆ.

ಕಡಿಮೆ ವೆಚ್ಚದ ಸುರಕ್ಷಿತ ಸ್ಪೀಡ್ ಅಲರ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ ಮತ್ತು ಸೀಟ್ - ಬೆಲ್ಟ್ ಜ್ಞಾಪನೆಗಳು ಬಹುತೇಕ ಕಾರುಗಳು ಹೊಂದಿವೆ. ಆದರೆ, ಜೀವ ಉಳಿಸುವ ಏರ್‌ಬ್ಯಾಗ್‌ಗಳು ಇನ್ನೂ ಕಡ್ಡಾಯವಾಗಿಲ್ಲ.

ಕಡಿಮೆ ವೆಚ್ಚದ ಸುರಕ್ಷಿತ ಸ್ಪೀಡ್ ಅಲರ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ ಮತ್ತು ಸೀಟ್ - ಬೆಲ್ಟ್ ಜ್ಞಾಪನೆಗಳು ಬಹುತೇಕ ಕಾರುಗಳು ಹೊಂದಿವೆ. ಆದರೆ, ಜೀವ ಉಳಿಸುವ ಏರ್‌ಬ್ಯಾಗ್‌ಗಳು ಇನ್ನೂ ಕಡ್ಡಾಯವಾಗಿಲ್ಲ.

Last Updated : Dec 29, 2020, 4:34 PM IST

ABOUT THE AUTHOR

...view details