ಕರ್ನಾಟಕ

karnataka

ETV Bharat / business

ಐಟಿ ಹಾರ್ಡ್​ವೇರ್‌ ಉತ್ಪಾದನೆ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಕ್ಯಾಬಿನೆಟ್​ ಅನುಮೋದನೆ - ಐಟಿ ಹಾರ್ಡ್​ವೇರ್​ ಪಿಎಲ್ಐ ಯೋಜನೆ

ಐಟಿ ಹಾರ್ಡ್​ವೇರ್ ಮೌಲ್ಯ ಸರಣಿಯಲ್ಲಿ ಬೃಹತ್ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವುದು ಈ ಉತ್ಪಾದನೆ ಆಧರಿತ ಪ್ರೋತ್ಸಾಹಕರ ಯೋಜನೆಯ ಉದ್ದೇಶವಾಗಿದೆ. ಈ ನಿರ್ದಿಷ್ಟ ಉದ್ದೇಶಿತ ಯೋಜನೆಯಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಆಲ್​ಇನ್ ಒನ್ ಪಿಸಿಗಳು ಮತ್ತು ಸರ್ವರ್​ಗಳು ಸೇರಿವೆ.

IT hardware
IT hardware

By

Published : Feb 24, 2021, 10:09 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾಹಿತಿ ತಂತ್ರಜ್ಞಾನದ ಹಾರ್ಡ್​ವೇರ್​ಗೆ ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್​ಐ) ಯೋಜನೆಗೆ ಅನುಮೋದನೆ ನೀಡಿತು.

ಈ ಯೋಜನೆ ಅಡಿಯಲ್ಲಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳ ಒಟ್ಟು ಮಾರಾಟದ ಮೇಲೆ (ಮೂಲ ವರ್ಷ ಅಂದರೆ 2019-20) ಅಲ್ಲಿ ವಿಸ್ತರಿತ ಪ್ರೋತ್ಸಾಹ ಶೇ 4ರಿಂದ ಶೇ 2ರಷ್ಟು/ಶೇ 1ರಷ್ಟು ಇರಲಿವೆ. ನಿರ್ದಿಷ್ಟ ವಲಯದ ಅರ್ಹ ಕಂಪನಿಗಳಿಗೆ ನಾಲ್ಕು ವರ್ಷಗಳವರೆಗೆ ಇದು ಲಭ್ಯವಾಗಲಿದೆ.

ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಉದ್ಯಮಗಳ ಖಾಸಗೀಕರಣಕ್ಕೆ ಬದ್ಧ: ಪ್ರಧಾನಿ ಮೋದಿ

ಲ್ಯಾಪ್ ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಪಿಸಿ ಮತ್ತು ಸರ್ವರ್​ಗಳು ಸೇರಿದಂತೆ ಐಟಿ ಹಾರ್ಡ್ ವೇರ್ ಉತ್ಪಾದನಾ ಕ್ಷೇತ್ರದ ಐದು ಪ್ರಮುಖ ಜಾಗತಿಕ ಕಂಪನಿಗಳು ಮತ್ತು ಹತ್ತು ದೇಶೀಯ ಕಂಪನಿಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗುವ ನಿರೀಕ್ಷೆ ಇದೆ. ಪ್ರಸ್ತುತ ಬಹುತೇಕ ಈ ಉತ್ಪನ್ನಗಳನ್ನು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಇದು ಅತ್ಯಂತ ಪ್ರಮುಖವಾಗಿದೆ.

ABOUT THE AUTHOR

...view details