ಕರ್ನಾಟಕ

karnataka

ETV Bharat / business

ವಿಶ್ವದ ಟಾಪ್​​ 100 ಬ್ಯಾಂಕ್​ಗಳಲ್ಲಿ ಭಾರತದ್ದು ಒಂದೇ ಒಂದು ಬ್ಯಾಂಕ್​ ಇದೆ: ಮುಖ್ಯ ಆರ್ಥಿಕ ಸಲಹೆಗಾರ ಖೇದ - ಮುಖ್ಯ ಆರ್ಥಿಕ ಸಲಹೆಗಾರ

ಭಾರತದಂತಹ ರಾಷ್ಟ್ರಕ್ಕೆ ದೊಡ್ಡ ಬ್ಯಾಂಕ್​ಗಳ ಅಗತ್ಯವಿದೆ. ದೊಡ್ಡ ಬ್ಯಾಂಕ್​ಗಳ ವಿಷಯದಲ್ಲಿ ಭಾರತವು ತೀರಾ ಹಿಂದುಳಿದಿದೆ. ಅಗ್ರ 100 ಬ್ಯಾಂಕ್​ಗಳ ಸಾಲಿನಲ್ಲಿ ಕೇವಲ ಒಂದು ಬ್ಯಾಂಕ್ ಹೊಂದಿದೆ. ಆದರೆ, ಚೀನಾವು 18 ಹಣಕಾಸು ಸಂಸ್ಥೆಗಳನ್ನು ಹೊಂದಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಹೇಳಿದರು.

CEA
ಮುಖ್ಯ ಆರ್ಥಿಕ ಸಲಹೆಗಾರ

By

Published : Jul 22, 2020, 5:04 PM IST

ನವದೆಹಲಿ:ಭಾರತದ ಬ್ಯಾಂಕಿಂಗ್ ಕ್ಷೇತ್ರದ ತೊಂದರೆಗಳು ಹೂಡಿಕೆ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರಿವೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ವಿ.ಸುಬ್ರಮಣಿಯನ್ ಹೇಳಿದ್ದಾರೆ.

ಫಿಕ್ಕಿಯ 17ನೇ ವಾರ್ಷಿಕ ಬಂಡವಾಳ ಮಾರುಕಟ್ಟೆ ಸಮ್ಮೇಳನದ 'ಸಿಎಪಿಎಎಂ2020' ಉದ್ದೇಶಿಸಿ ಮಾತನಾಡಿದ ಅವರು, ಈ ವಲಯವು ಪ್ರಮಾಣ ಮತ್ತು ಗುಣಮಟ್ಟದಂತಹ ಎರಡು ಸಮಸ್ಯೆಗಳನ್ನು ಎದುರಿಸುತ್ತಿದೆ. ಎನ್‌ಪಿಎ ಮತ್ತು ರಿಸ್ಕ್​ ಮ್ಯಾನೆಜ್​ಮೆಂಟ್​, ಹೂಡಿಕೆಯ ಮೇಲೆ ಪರಿಣಾಮ ಬೀರಿವೆ. ಇದು ಬೆಳವಣಿಗೆಯ ಮೇಲೆ ಹೊಡೆತ ನೀಡಿದ್ದು, ಅಂತಿಮವಾಗಿ ಬಳಕೆಯನ್ನೇ ತಗ್ಗಿಸಿದೆ ಎಂದು ವ್ಯಾಖ್ಯಾನಿಸಿದರು.

ಭಾರತದಂತಹ ರಾಷ್ಟ್ರಕ್ಕೆ ದೊಡ್ಡ ಬ್ಯಾಂಕ್​ಗಳ ಅಗತ್ಯವಿದೆ. ದೊಡ್ಡ ಬ್ಯಾಂಕ್​ಗಳ ವಿಷಯದಲ್ಲಿ ಭಾರತವು ತೀರಾ ಹಿಂದುಳಿದಿದೆ. ಅಗ್ರ 100 ಬ್ಯಾಂಕ್​ಗಳ ಸಾಲಿನಲ್ಲಿ ಕೇವಲ ಒಂದು ಬ್ಯಾಂಕ್ ಹೊಂದಿದೆ. ಆದರೆ, ಚೀನಾವು 18 ಹಣಕಾಸು ಸಂಸ್ಥೆಗಳನ್ನು ಹೊಂದಿದೆ ಎಂದರು.

ದೊಡ್ಡ ಸಾಲಗಾರರ ಗುಣಮಟ್ಟವು ಉತ್ತಮವಾಗಿಲ್ಲ. ಸಾಲ ನೀಡುವ ಮೊದಲು ಬ್ಯಾಂಕ್​ಗಳು ಸಾಲಗಾರರ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಬೇಕು. ಸಾಲ ನೀಡುವುದಕ್ಕಿಂತ ಹೆಚ್ಚಾಗಿ ಬ್ಯಾಂಕ್​ಗಳು ಹೂಡಿಕೆ ಮಾಡುತ್ತಿವೆ ಎಂದು ಹೇಳಿದರು.

ಪ್ರಸ್ತುತದ ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಭಾರತವು ದೊಡ್ಡ ಆರ್ಥಿಕತೆ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು 'ಆತ್ಮನಿರ್ಭರ ಭಾರತ ಬಂಡವಾಳ ಮಾರುಕಟ್ಟೆಯ ಪಾತ್ರ' ಎಂಬ ವಿಷಯದ ಕುರಿತು ಮಾತನಾಡಿದರು.

ABOUT THE AUTHOR

...view details