ಕರ್ನಾಟಕ

karnataka

ETV Bharat / business

ಬ್ಯಾಂಕ್​ ವಿಲೀನದ ಹಾದಿ ಸುಗಮಕ್ಕೆ 34 ಕಾರ್ಯಪಡೆ ತಂಡಗಳ ರಚನೆ... ಮಿಷನ್​ ಮರ್ಜರ್​ ಶುರು

34 ಕಾರ್ಯಪಡೆಗಳ ಒಂದೊಂದು ತಂಡವು ವಿವಿಧ ಕ್ರಿಯಾತ್ಮಕ ಪ್ರದೇಶಗಳ ಮೂರು ಬ್ಯಾಂಕ್​ಗಳಿಂದ ತಲಾ ಇಬ್ಬರು ಸದಸ್ಯರನ್ನು ಒಳಗೊಂಡಿದೆ. ಭವಿಷ್ಯದಲ್ಲಿ ಗ್ರಾಹಕ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ಇದು ನೆರವಾಗಲಿದೆ. ವಿಲೀನ ಪ್ರಕ್ರಿಯೆ ಜಾರಿಗೆ ಬರುವವರೆಗೆ ಮಧ್ಯಂತರ ಅವಧಿಯಲ್ಲಿ ಗ್ರಾಹಕರಿಗೆ ವಿಸ್ತರಿಸಿದ ಸಾಲ, ಸಾಲ ನಿಯಮಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ಕ್ರಿಯಾತ್ಮಕ ತಂಡ ಕಾರ್ಯನಿರ್ವಹಿಸಲಿದೆ. ಇದು ಬ್ಯಾಂಕ್​ಗಳ ವಿಲೀನಕ್ಕೆ ಎದುರಾಗಲಿರುವ ತೊಡಕುಗಳನ್ನು ನಿವಾರಿಸಲಿದೆ.

ಸಾಂದರ್ಭಿಕ ಚಿತ್ರ

By

Published : Oct 3, 2019, 8:12 AM IST

ನವದೆಹಲಿ:ಯುನೈಟೆಡ್​ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ), ಪಂಜಾಬ್​ ನ್ಯಾಷನಲ್​ ಬ್ಯಾಂಕ್ (ಪಿಎನ್​ಬಿ) ಮತ್ತು ಓರಿಯಂಟಲ್​ ಬ್ಯಾಂಕ್ ಆಫ್ ಕಾಮರ್ಸ್​ (ಒಬಿಸಿ) ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯ ಹಾದಿಯನ್ನು ಸುಗಮಗೊಳಿಸಲು 34 ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಲೀನ ಪ್ರಕ್ರಿಯು ಮುಂದಿನ ವರ್ಷದ ಏಪ್ರಿಲ್​ 1ರಿಂದ ಜಾರಿಗೆ ಬರಲಿದೆ. ಜೋಡಣೆ ಪ್ರಕ್ರಿಯೆಗೆ ಪರಿಹಾರಗಳನ್ನು ನೀಡಲು ಮೂವತ್ತು ನಾಲ್ಕು ಕ್ರಿಯಾತ್ಮಕ ತಂಡಗಳನ್ನು ರಚಿಸಲಾಗಿದೆ ಎಂದು ಯುಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದೊಂದು ತಂಡವು ವಿವಿಧ ಕ್ರಿಯಾತ್ಮಕ ಪ್ರದೇಶಗಳ ಮೂರು ಬ್ಯಾಂಕ್​ಗಳಿಂದ ತಲಾ ಇಬ್ಬರು ಸದಸ್ಯರನ್ನು ಒಳಗೊಂಡಿದೆ. ಭವಿಷ್ಯದಲ್ಲಿ ಗ್ರಾಹಕ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ಇದು ನೆರವಾಗಲಿದೆ. ವಿಲೀನ ಪ್ರಕ್ರಿಯೆ ಜಾರಿಗೆ ಬರುವವರೆಗೆ ಮಧ್ಯಂತರ ಅವಧಿಯಲ್ಲಿ ಗ್ರಾಹಕರಿಗೆ ವಿಸ್ತರಿಸಿದ ಸಾಲ, ಸಾಲ ನಿಯಮಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ಕ್ರಿಯಾತ್ಮಕ ತಂಡ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಬ್ಯಾಂಕಿಂಗ್ ಭವಿಷ್ಯದ ಬಗೆಗಿನ ಆತಂಕಗಳನ್ನು ನಿವಾರಿಸಲು ಯುಬಿಐ ಕೋಲ್ಕತಾ, ಗುವಾಹಟಿ ಮತ್ತು ಪಾಟ್ನಾದಲ್ಲಿ ಗ್ರಾಹಕರ ಸಭೆ ನಡೆಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಂದಿನ ವರ್ಷ ಏಪ್ರಿಲ್ 1ರ ಒಳಗೆ ಬ್ಯಾಲೆನ್ಸ್ ಶೀಟ್ ವಿಲೀನ ಸಂಭವಿಸುವ ಸಾಧ್ಯತೆಯಿದ್ದು, ಮಾನವ ಸಂಪನ್ಮೂಲ ಮತ್ತು ಐಟಿ ಏಕೀಕರಣ ಪೂರ್ಣಗೊಳ್ಳಲು ಇನ್ನೂ ಮೂರರಿಂದ ಆರು ತಿಂಗಳುಗಳು ಬೇಕಾಗುತ್ತದೆ ಎಂದು ಯುಬಿಐ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ. ಕೆ. ಪ್ರಧಾನ್ ಈ ಹಿಂದೆ ಹೇಳಿದ್ದರು.

ABOUT THE AUTHOR

...view details