ಬೆಂಗಳೂರು:ಕೊರೊನಾ ವೈರಸ್ ಏಕಾಏಕಿ ಹಬ್ಬುತ್ತಿದ್ದ ಇದರ ವಿರುದ್ಧ ಹೋರಾಡಲು ಇಡೀ ರಾಷ್ಟ್ರಾದ್ಯಂತ ಲಾಕ್ಡೌನ್ ವಿಧಿಸಲಾಗಿದೆ. ಆನ್‌ಲೈನ್ ಆಹಾರ ವಿತರಣಾ ಫ್ಲಾಟ್ಫಾರ್ಮ್ಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೊ ಫುಡ್ ಆರ್ಡರ್ಗಳನ್ನು ಪೂರೈಸಲು ಸಂಪರ್ಕವಿಲ್ಲದ ವಿತರಣೆಯ ಆಯ್ಕೆ ಮಾಡಿಕೊಂಡಿದೆ.
ಸಂಪರ್ಕವಿಲ್ಲದ ವಿತರಣೆ ಹೇಗೆ ಕೆಲಸ ಮಾಡುತ್ತದೆ?
ಕೊರೊನಾ ವೈರಸ್ ಸಂಪರ್ಕದ ಮೂಲಕ ಹರಡುತ್ತಿರುವುದರಿಂದ ಸ್ವಿಗ್ಗಿ ಮತ್ತು ಜೊಮ್ಯಾಟೊ ಅಪ್ಲಿಕೇಷನ್‌ನಿಂದ ಆರ್ಡರ್ ತೆಗೆದುಕೊಳ್ಳುತ್ತದೆ. ಸಂಪರ್ಕವಿಲ್ಲದ ವಿತರಣೆಯನ್ನು ಉಚಿತವಾಗಿ ನೀಡುತ್ತದೆ.
ಗ್ರಾಹಕರ ಆರ್ಡರ್ ಸ್ವೀಕರಿಸಿದ ನಂತರ ರೆಸ್ಟೋರೆಂಟ್ ಆಹಾರ ತಯಾರಿಸುತ್ತದೆ. ಅದನ್ನು ವಿತರಣಾ ಏಜೆಂಟ್‌ಗಳಿಗೆ ನೀಡುತ್ತದೆ. ಈ ವಿತರಣಾ ಏಜೆಂಟರು ಗ್ರಾಹಕರು ಇರುವ ಸ್ಥಳಕ್ಕೆ ಬಂದು ಆಹಾರದ ಪ್ಯಾಕೇಜ್ ಅನ್ನು ಸ್ವಚ್ಛವಾದ ಸ್ಥಳದಲ್ಲಿ ಇಡುತ್ತಾರೆ. ನಂತರ ಏಜೆಂಟರು ಫೋಟೋ ಕ್ಲಿಕ್ ಮಾಡಿ ಅಪ್ಲಿಕೇಷನ್ ಮೂಲಕ ಗ್ರಾಹಕರಿಗೆ ಕಳುಹಿಸುತ್ತಾರೆ.
ಆಹಾರ ವಿತರಣೆಯಲ್ಲಿ ಯಾವುದೇ ಸಂಪರ್ಕ ಅಥವಾ ಸ್ಪರ್ಶವಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ನಗದು ಪಾವತಿ ವಿತರಣೆಯು ಈ ಸೇವೆಗೆ ಅನ್ವಯಿಸುವುದಿಲ್ಲ.
ಇದು ಸುರಕ್ಷಿತವೇ?
ಇದೊಂದು ಟ್ರಿಕಿ ಪ್ರಶ್ನೆಯಾಗಿ ಉಳಿಯುತ್ತದೆ. ಏಜೆಂಟರು ಮುಖವಾಡ ಮತ್ತು ಕೈಗವಸು ಧರಿಸುತ್ತಿದ್ದರೂ ಆಹಾರ ಯಾರು ತಯಾರಿಸಿದರು ಮತ್ತು ರೆಸ್ಟೋರೆಂಟ್‌ನಲ್ಲಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ.