ಮುಂಬೈ: ತನ್ನ ಉಳಿವಿಗಾಗಿ ತೀವ್ರ ಸಂಕಷ್ಟಪಡುತ್ತಿರುವ ಏರ್ ಇಂಡಿಯಾ, ಇನ್ನಾರು ತಿಂಗಳಲ್ಲಿ ಖಾಸಗಿ ಖರೀದಿದಾರರು ಮುಂದೆ ಬಾರದಿದ್ದರೆ ಜೂನ್ ವೇಳೆಗೆ ಸೇವೆ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಹಿರಿಯ ವಿಮಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ವಾಹಕದ ಭವಿಷ್ಯವು ತೂಗುಯ್ಯಾಲೆಯಂತಾಗಿದೆ. ಈಗಾಗಲೇ ಕಾರ್ಯಾಚರಣೆ ನಿಲ್ಲಿಸಿದ 12 ವಿಮಾನಗಳನ್ನು ಪುನರಾರಂಭಿಸಲು ಹಣದ ಅವಶ್ಯಕತೆಯಿದೆ ಎಂದು ಅಧಿಕಾರಿ ಹೇಳಿದರು.ಏರ್ ಇಂಡಿಯಾ ಸಂಸ್ಥೆಯು ಸುಮಾರು 60,000 ಕೋಟಿ ರೂ.ಗಳಷ್ಟು ಸಾಲದ ವಿಷ ವರ್ತುಲದಲ್ಲಿ ಸಿಲುಕಿದೆ. ಸರ್ಕಾರವು ಇನ್ನೂ ಹೂಡಿಕೆ ಮಾಡುವ ವಿಧಾನಗಳ ಬಗ್ಗೆ ಯೋಚಿಸುತ್ತಿದೆ. ಮುಂದಿನ ವರ್ಷ ಜೂನ್ ವೇಳೆಗೆ ನಿರೀಕ್ಷಿತ ಖರೀದಿದಾರರು ಬರದಿದ್ದರೆ ಏರ್ ಇಂಡಿಯಾ ಜೆಟ್ ಏರ್ವೇಸ್ ಹಾದಿಯಲ್ಲಿ ಸಾಗಲಿದೆ ಎಂದು ಎಚ್ಚರಿಸಿದ್ದಾರೆ.