ಕರ್ನಾಟಕ

karnataka

By

Published : Jan 13, 2021, 5:24 PM IST

ETV Bharat / business

ಜಸ್ಟ್​ 3 ದಿನದಲ್ಲಿ 25 ದಶಲಕ್ಷ ಬಳಕೆದಾರರು ಟೆಲಿಗ್ರಾಂಗೆ ಸೇರ್ಪಡೆ

ಜನವರಿ ಮೊದಲ ವಾರದಲ್ಲಿ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಮೀರಿದೆ. ಕಳೆದ 72 ಗಂಟೆಗಳಲ್ಲಿ 25 ಮಿಲಿಯನ್ ಹೊಸ ಬಳಕೆದಾರರು ಟೆಲಿಗ್ರಾಂಗೆ ಸೇರ್ಪಡೆಗೊಂಡಿದ್ದಾರೆ. ಸೆನ್ಸಾರ್ ಟವರ್ ಡೇಟಾ ಉಲ್ಲೇಖಿಸಿದ ವರದಿಗಳು, ಭಾರತದಲ್ಲಿ ಜನವರಿ 6-10ರ ನಡುವೆ ಟೆಲಿಗ್ರಾಮ್ 1.5 ಮಿಲಿಯನ್ ಹೊಸ ಡೌನ್‌ಲೋಡ್‌ ಹೊಂದಿದೆ ಎಂದಿವೆ.

Telegram
ಟೆಲಿಗ್ರಾಂ

ನವದೆಹಲಿ: ಮೆಸೇಜಿಂಗ್ ಸೇವೆ ಟೆಲಿಗ್ರಾಂ ಜಾಗತಿಕವಾಗಿ 500 ಮಿಲಿಯನ್ ಚಂದಾದಾರರನ್ನು ದಾಟಿದ್ದು, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಾಟ್ಸಪ್​ನ ಗೌಪ್ಯತೆ ನೀತಿ ನವೀಕರಣದ ವಿವಾದದ ಮಧ್ಯೆ ಟೆಲಿಗ್ರಾಂಗೆ 25 ಮಿಲಿಯನ್ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ.

ಟೆಲಿಗ್ರಾಂ, ಭಾರತೀಯ ನಿರ್ದಿಷ್ಟ ಬಳಕೆದಾರರ ಸಂಖ್ಯೆ ನಿರ್ದಿಷ್ಟಪಡಿಸದಿದ್ದರೂ ಹೊಸ ಬಳಕೆದಾರರಲ್ಲಿ 38 ಪ್ರತಿಶತದಷ್ಟು ಜನರು ಏಷ್ಯಾದವರಾಗಿದ್ದಾರೆ. ಯುರೋಪ್ (ಶೇ 27ರಷ್ಟು), ಲ್ಯಾಟಿನ್ ಅಮೆರಿಕ (ಶೇ 21ರಷ್ಟು) ಮತ್ತು ಮೆನಾ (ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಶೇ 8ರಷ್ಟು).

ಜನವರಿ ಮೊದಲ ವಾರದಲ್ಲಿ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಮೀರಿದೆ. ಕಳೆದ 72 ಗಂಟೆಗಳಲ್ಲಿ 25 ಮಿಲಿಯನ್ ಹೊಸ ಬಳಕೆದಾರರು ಟೆಲಿಗ್ರಾಂಗೆ ಸೇರ್ಪಡೆಗೊಂಡಿದ್ದಾರೆ. ಸೆನ್ಸಾರ್ ಟವರ್ ಡೇಟಾ ಉಲ್ಲೇಖಿಸಿದ ವರದಿಗಳು, ಭಾರತದಲ್ಲಿ ಜನವರಿ 6-10ರ ನಡುವೆ ಟೆಲಿಗ್ರಾಮ್ 1.5 ಮಿಲಿಯನ್ ಹೊಸ ಡೌನ್‌ಲೋಡ್‌ ಹೊಂದಿದೆ ಎಂದಿವೆ.

ಇದನ್ನೂ ಓದಿ: ಬಜೆಟ್ 2021: ಕೀಟನಾಶಕ GST ಸ್ಲ್ಯಾಬ್​ 18 ರಿಂದ 5ಕ್ಕೆ ತಗ್ಗಿಸಿ- ಪಿಎಂಎಫ್‌ಐ ಒತ್ತಾಯ

ಭಾರತವು ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆ ಮತ್ತು ಡೇಟಾದ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. 2020ರ ಅಕ್ಟೋಬರ್ 30 ಹೊತ್ತಿಗೆ ಒಟ್ಟು ದೂರವಾಣಿ ಸಂಪರ್ಕಗಳು 117 ಕೋಟಿ ಆಗಿದ್ದು, ಅದರಲ್ಲಿ 115 ಕೋಟಿ ಮೊಬೈಲ್ ಸಂಪರ್ಕವಾಗಿದೆ.

ಎರಿಕ್ಸನ್ ವರದಿ ಅನ್ವಯ, ಭಾರತೀಯರು ತಿಂಗಳಿಗೆ ಸರಾಸರಿ 12 ಜಿಬಿ ಡೇಟಾವನ್ನು 2019ರಲ್ಲಿ ಬಳಸಿದ್ದಾರೆ. ಇದು ಜಾಗತಿಕವಾಗಿ ಅತಿಹೆಚ್ಚು ಬಳಕೆಯಾಗಿದೆ. 2025ರ ವೇಳೆಗೆ ತಿಂಗಳಿಗೆ ಸುಮಾರು 25 ಜಿಬಿಗೆ (ಗಿಗಾಬೈಟ್) ಏರಿಕೆಯಾಗುವ ನಿರೀಕ್ಷೆಯಿದೆ.

ABOUT THE AUTHOR

...view details