ನವದೆಹಲಿ:ಚೀನಾ ಮೂಲದ ಟಿಸಿಎಲ್ ಎಲೆಕ್ಟ್ರಾನಿಕ್ಸ್ ಕಂಪನಿಯು ತನ್ನ ಆಂಡ್ರಾಯ್ಡ್ 11 ಆಧಾರಿತ ಟಿವಿ ಮಾಡೆಲ್ ಪಿ 725 ಅನ್ನು ಹೆಚ್ಚುವರಿ ಕ್ಯಾಮರಾದ ವಿಡಿಯೋ ಕಾಲಿಂಗ್ ಫೀಚರ್ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಪ್ರಸ್ತುತ ದೇಶದ ಟಿವಿ ಮತ್ತು ಎಸಿ ವಿಭಾಗಗಳನ್ನು ಮಾತ್ರ ಪೂರೈಸುತ್ತಿರುವ ಕಂಪನಿಯು ಭಾರತದಲ್ಲಿ ಬೇಸಿಗೆಗಿಂತ ಮುಂಚಿತವಾಗಿ ಹೊಸ ಶ್ರೇಣಿಯ ಹವಾನಿಯಂತ್ರಕಗಳನ್ನು ಸಹ ಬಿಡುಗಡೆ ಮಾಡಿದೆ.
ಆ್ಯಂಡ್ರಾಯ್ಡ್ 11 ಚಲಾಯಿತ ಭಾರತದ ಮೊದಲ ಮಾಡಲ್ ಪಿ 725 ಅನ್ನು ಟಿಸಿಎಲ್ ಬಿಡುಗಡೆ ಮಾಡಿದ್ದು, 41,990 ರೂ.ಯಿಂದ 89,990 ರೂ. ನಡುವೆ ದರ ನಿಗದಿ ಮಾಡಿದೆ. 65 ಇಂಚ್ಗಳ ಟಿವಿಯನ್ನ ಅಮೆಜಾನ್‌ನಲ್ಲಿ ಪ್ರತ್ಯೇಕವಾಗಿ 89,990 ರೂ. ಗೆ ಬಿಡುಗಡೆ ಮಾಡಲಿದೆ ಎಂದು ಕಂಪನಿ ಬಿಡುಗಡೆ ಸಮಾರಂಭದಲ್ಲಿ ತಿಳಿಸಿದೆ.
ಇದನ್ನೂ ಓದಿ: 2021ರ ಟಿವಿಎಸ್ ಅಪಾಚೆ ಆರ್ಟಿಆರ್ 160 4 ವಿ ಸೀರಿಸ್ ಲಾಂಚ್: ಬೈಕ್ ದರ, ಫೀಚರ್ ಹೀಗಿದೆ
ಟಿಸಿಎಲ್ ಇಂಡಿಯಾದ ಜನರಲ್ ಮ್ಯಾನೇಜರ್ ಮೈಕ್ ಚೆನ್, "ನಮ್ಮ ಇತ್ತೀಚಿನ ಉತ್ಪನ್ನಗಳ ಬಿಡುಗಡೆಯು ಹೊಸ ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ತರುವ ಟಿಸಿಎಲ್‌ನ ಬದ್ಧತೆಯನ್ನು ಸಾರುತ್ತದೆ. ಈ ಹೊಸದಾದ ಸಾಮಾನ್ಯ ಸಮಯದಲ್ಲಿ ವಿಕಾಸಗೊಳ್ಳುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಸೌಕರ್ಯ ಸಾಧನಗಳನ್ನು ನೀಡಲಿದೆ ಎಂದರು.