ಕರ್ನಾಟಕ

karnataka

ETV Bharat / business

ಸ್ಪೈಸ್​ಜೆಟ್​ನಿಂದ ಮನೆ, ಪ್ರಯಾಣದಲ್ಲೂ ಬಳಸಬಹುದಾದ ವೆಂಟಿಲೇಟರ್​ ಲಾಂಚ್​: ಬೆಲೆ ಎಷ್ಟು ಗೊತ್ತೆ? - ವೆಂಟಿಲೇಟರ್​

ಸೌಮ್ಯದಿಂದ ಮಧ್ಯಮ ಹುಸಿರಾಟದಂತಹ ಸಮಸ್ಯೆಗಳಿಗೆ ಒಳಗಾದವರಿಗೆ ನೆರವಾಗಬಲ್ಲ ಆಕ್ರಮಣಶೀಲವಲ್ಲದ ಪೋರ್ಟಬಲ್ ವೆಂಟಿಲೇಟರ್ ಅನ್ನು ವಿಮಾನಯಾನ ಸಂಸ್ಥೆ ಸ್ಪೈಸ್​ಜೆಟ್​‌ ತಯಾರಿಸಿದೆ.

SpiceJet
ಸ್ಪೈಸ್​ಜೆಟ್​

By

Published : Aug 31, 2020, 5:47 PM IST

ನವದೆಹಲಿ: ತನ್ನ ವ್ಯಾಪಾರ ಹಿತಾಸಕ್ತಿಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಪ್ರಮುಖ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್, ವೈದ್ಯಕೀಯ ಉಪಕರಣಗಳ ತಯಾರಿಕೆ 'ಸ್ಪೈಸ್‌ಆಕ್ಸಿ'ಅನ್ನು ಆರಂಭಿಸಿದೆ.

ಸೌಮ್ಯದಿಂದ ಮಧ್ಯಮ ಹುಸಿರಾಟದಂತಹ ಸಮಸ್ಯೆಗಳಿಗೆ ಒಳಗಾದವರಿಗೆ ನೆರವಾಗಬಲ್ಲ ಆಕ್ರಮಣಶೀಲವಲ್ಲದ ಪೋರ್ಟಬಲ್ ವೆಂಟಿಲೇಟರ್‌ ತಯಾರಿಸಿದೆ.

ಈ ಗಾಗಲೇ ವಿಮಾನಯಾನ ಉದ್ಯಮದಲ್ಲಿ ಹೆಸರುವಾಸಿ ಆಗಿರುವ ಸ್ಪೈಸ್​​ಜೆಟ್​, ಈ ಹಿಂದೆ ಫ್ಯಾಷನ್, ಚಿಲ್ಲರೆ ವ್ಯಾಪಾರ, ಸರಕು ಮತ್ತು ಇ-ಕಾಮರ್ಸ್, ಸರಕು ಸಾಗಣೆ, ತಾಜಾ ಕೃಷಿ ಉತ್ಪನ್ನಗಳ ಉದ್ಯಮಕ್ಕೂ ಪ್ರವೇಶಿಸಿತ್ತು. ಸ್ಪೈಸ್ ಜೆಟ್ ಟೆಕ್ನಿಕ್ ರಕ್ಷಣಾ ಕ್ಷೇತ್ರದಲ್ಲಿ ಸ್ಪರ್ಧೆ ನೀಡಲು ಸಜ್ಜಾಗುತ್ತಿದೆ. ಇದು ಭಾರತದ ಅತಿದೊಡ್ಡ ಸರಕು ಸಾಗಣೆ ಕಂಪನಿ ಸಹ ಆಗಿದೆ.

ಸ್ಪೈಸ್‌ಜೆಟ್ ಫಿಂಗರ್‌ಟಿಪ್ ಪಲ್ಸ್ ಆಕ್ಸಿಮೀಟರ್ ಸಹ ಪರಿಚಯಿಸಿದ್ದು, ಇದು ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯಲು ನೆರವಾಗುತ್ತಿದೆ. ರೋಗಿಗಳಿಗೆ ಉಸಿರಾಟದ ಅಥವಾ ಆಕ್ರಮಣಶೀಲವಲ್ಲದ ವಾತಾಯನ ವೆಂಟಿಲೇಟರ್​ ಅನ್ನು ಸ್ಪೈಸ್‌ಜೆಟ್​​ನ ಟೆಕ್ನಿಕ್‌ನ ಎಂಜಿನಿಯರ್‌ಗಳ ತಂಡವು ವಿನ್ಯಾಸಗೊಳಿಸಿದೆ.

'ಸ್ಪೈಸ್‌ಆಕ್ಸಿ' ವೆಂಟಿಲೇಟರ್ ಮತ್ತು ಪಲ್ಸ್ ಆಕ್ಸಿಮೀಟರ್ 'ಮೇಡ್ ಇನ್ ಇಂಡಿಯಾ' ಅಭಿಯಾನದ ಉತ್ಪನ್ನವಾಗಿವೆ. ಇದನ್ನು ನಮ್ಮ ಪ್ರತಿಭಾವಂತ ಎಂಜಿನಿಯರ್‌ಗಳ ತಂಡವು ವಿನ್ಯಾಸಗೊಳಿಸಿ ತಯಾರಿಸಿದೆ ಎಂದು ಸ್ಪೈಸ್‌ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದರು.

ಆಕ್ರಮಣಶೀಲವಲ್ಲದ, ಪೋರ್ಟಬಲ್ ವೆಂಟಿಲೇಟರ್‌ ಉಸಿರಾಟದ ತೊಂದರೆ ಹಾಗೂ ಇತರ ದೀರ್ಘಕಾಲದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗಬಲ್ಲದು. ಇದನ್ನು ಮನೆಯಲ್ಲಿ ಸುಲಭವಾಗಿ ಬಳಸಬಹುದು ಜೊತೆಗೆ ಪ್ರಯಾಣದಲ್ಲಿ ಇರುವಾಗಲೂ ತೆಗೆದುಕೊಂಡು ಹೋಗಬಹುದು ಎಂದರು.

ಸ್ಪೈಸ್​ಸ್ಟೈಲ್​ ವೆಬ್​ಸೈಟ್​ನಲ್ಲಿ ಮಾಹಿತಿ ಅನ್ವಯ ಸ್ಪೈಸ್​​ಆಕ್ಯಿ ಬಿಐಪಿಎಪಿ ವೆಂಟಿಲೇಟರ್​ನ ಫ್ಲಾಟ್​ ದರ 59,950 ಹಾಗೂ ಆಕ್ಸಿಜನ್ ಕಾನ್ಸ್​ಟೇಟರ್​ ಫ್ಲಾಟ್​ ದರವನ್ನು 35,000 ರೂ.ಗೆ ನಿಗದಿಪಡಿಸಲಾಗಿದೆ.​​

ABOUT THE AUTHOR

...view details