ಮುಂಬೈ: ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಮಹತ್ವ ನೀಡಲು ಬ್ಯಾಂಕಿಂಗ್ ವ್ಯವಸ್ಥೆಯಿಂದ ಡಿಜಿಟಲ್ ಕಾರ್ಡ್ಗಳನ್ನು ದೂರಗೊಳಿಸುವ ಉದ್ದೇಶವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಮುಖ್ಯಸ್ಥ ರಜನೀಶ್ ಕುಮಾರ್ ಅವರು ಡೆಬಿಟ್, ಕ್ರೆಡಿಟ್ ಕಾರ್ಡ್ಗಳ ವಿದಾಯದ ಮುನ್ಸೂಚನೆ ನೀಡಿದ್ದಾರೆ.
ವಾರ್ಷಿಕ ಫೈಬ್ಯಾಕ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಎಸ್ಬಿಐ ಗ್ರಾಹಕರು ಅತಿಯಾಗಿ ಡೆಬಿಟ್ ಕಾರ್ಡ್ಗಳನ್ನು ಯಥೇಚ್ಛವಾಗಿ ಹೊಂದಿರುವ ಹೊರತಾಗಿಯೂ ಬ್ಯಾಂಕ್, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಡೆಬಿಟ್ ಕಾರ್ಡ್ ವ್ಯವಸ್ಥೆಯಲ್ಲಿ ಅಂತ್ಯದ ಆರಂಭ ಎನ್ನಬಹುದು ಎಂದು ಹೇಳಿದರು.
ಡೆಬಿಟ್ ಕಾರ್ಡ್ಗಳಿಗೆ ಅಂತ್ಯವಾಡುವುದು ನಮ್ಮ ಬಯಕೆ. ಇದನ್ನು ಖಂಡಿತವಾಗಿ ಮಾಡುತ್ತೇವೆ ಎಂಬ ಭರವಸೆ ಇದೆ. ದೇಶಾದ್ಯಂತ ಸುಮಾರು 90 ಕೋಟಿ ಡೆಬಿಟ್ ಮತ್ತು 3 ಕೋಟಿ ಕ್ರೆಡಿಟ್ ಕಾರ್ಡ್ಗಳಿವೆ. ಯೋನೋ ಪ್ಲಾಟ್ಫಾರ್ಮ್ನಂತಹ ಅಡ್ವಾನ್ಸಡ್ ಡಿಜಿಟಲ್ ಸಲ್ಯೂಶನ್ಸ್ ಮುಖೇನ ಡೆಬಿಟ್ ಕಾರ್ಡ್ ಮುಕ್ತ ದೇಶ ಸಾಧ್ಯ ಎಂದು ರಜನೀಶ್ ಹೇಳಿದರು.
ಯೋನೋ ಮೂಲಕ ಎಟಿಎಂಗಳಿಂದ ಹಣ ಸ್ವೀಕರಿಸಬಹುದು. ಕಾರ್ಡ್ ಇಲ್ಲದೆಯೇ ನಾನಾ ಕಡೆ ಖರೀದಿಗಳಿಗೆ ಪಾವತಿಸಬಹುದು. ಈಗಾಗಲೇ 68,000 ಯೋನೋ ಕ್ಯಾಶ್ ಪಾಯಿಂಟ್ ಸ್ಥಾಪಿಸಲಾಗಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಇಂತಹ 10 ಲಕ್ಷ ಪಾಯಿಂಟ್ಗಳು ತಲೆ ಎತ್ತಲಿವೆ ಎಂದು ತಿಳಿಸಿದರು.