ಕರ್ನಾಟಕ

karnataka

By

Published : Jan 25, 2021, 4:56 PM IST

ETV Bharat / business

ಒಂದು ಫೋನ್​ ಕಾಲಿಗೆ ಮನೆ ಬಾಗಿಲಿಗೆ ಬರಲಿದೆ SBI ಬ್ಯಾಂಕಿಂಗ್ ಸೇವೆ: ನೋಂದಣೆ ಪ್ರಕ್ರಿಯೆ ಹೀಗಿದೆ

ಎಸ್‌ಬಿಐನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಮನೆಯ ಶಾಖೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ನೋಂದಾಯಿಸಿದ ವಿಳಾಸಗಳನ್ನು ಹೊಂದಿರುವ ಹಿರಿಯ ನಾಗರಿಕರಿಗೆ ಮತ್ತು ವಿಭಿನ್ನ ಸಾಮರ್ಥ್ಯದ ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ (ಡಿಬಿಎಸ್) ಸೇವೆಗಳನ್ನು ಒದಗಿಸಲಾಗುತ್ತದೆ. ಈ ಸೇವೆ ಸಂಪೂರ್ಣ ಕೆವೈಸಿ ನೀಡಿದ ಖಾತೆದಾರರಿಗೆ, ಉಳಿತಾಯ ಖಾತೆ ಮತ ಚಾಲ್ತಿ ಖಾತೆಗಳ ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿವೆ.

SBI
SBI

ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ 'ಡೋರ್‌ಸ್ಟೆಪ್ ಬ್ಯಾಂಕಿಂಗ್' ಸೌಲಭ್ಯಗಳನ್ನು ನೀಡುತ್ತಿದ್ದು, ಗ್ರಾಹಕರು ಬ್ಯಾಂಕ್ ನೀಡುವ ಹಲವು ಹಣಕಾಸು ಸೌಲಭ್ಯಗಳ ಲಾಭ ಪಡೆಯಬಹುದು.

ಕೋವಿಡ್ ಸಾಂಕ್ರಾಮಿಕದ ಮಧ್ಯೆ ಜನರು, ಅದರಲ್ಲಿ ವಿಶೇಷವಾಗಿ ಹಿರಿಯ ನಾಗರಿಕರು ಹೊರಗೆ ಓಡಾಡುವುದನ್ನು ತಪ್ಪಿಸಲು ನಗದು / ಚೆಕ್ ಪಿಕಪ್ ಮತ್ತು ವಿತರಣೆಯಂತಹ ಸೇವೆಗಳನ್ನು ಒದಗಿಸುತ್ತಿದೆ.

ನಿಮ್ಮ ಬ್ಯಾಂಕ್ ಈಗ ನಿಮ್ಮ ಮನೆ ಬಾಗಿಲಲ್ಲಿದೆ. ಮನೆ ಬಾಗಿಲಿನ ಬ್ಯಾಂಕಿಂಗ್​ಗಾಗಿ ಇಂದೇ ನೋಂದಾಯಿಸಿ. ಹೆಚ್ಚಿನ ಮಾಹಿತಿಗಾಗಿ: https: //bank.sbi/dsb. ಟೋಲ್-ಫ್ರೀ ನಂ. 1800 1037 188 ಅಥವಾ 1800 1213 721ಗೆ ಸಂಪರ್ಕಿಸಬಹುದು ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಹಳೆಯ 100, 10, 5 ರೂ. ನೋಟ್​ಗಳ​ ಡಿಮಾನಿಟೈಸೇಷನ್ ವದಂತಿ: ಈಗ RBI ಹೇಳುವುದೇನು?

ಎಸ್‌ಬಿಐನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಮನೆಯ ಶಾಖೆಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ನೋಂದಾಯಿಸಿದ ವಿಳಾಸಗಳನ್ನು ಹೊಂದಿರುವ ಹಿರಿಯ ನಾಗರಿಕರಿಗೆ ಮತ್ತು ವಿಭಿನ್ನ ಸಾಮರ್ಥ್ಯದ ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ (ಡಿಬಿಎಸ್) ಸೇವೆಗಳನ್ನು ಒದಗಿಸಲಾಗುತ್ತದೆ. ಈ ಸೇವೆ ಸಂಪೂರ್ಣ ಕೆವೈಸಿ ನೀಡಿದ ಖಾತೆದಾರರಿಗೆ, ಉಳಿತಾಯ ಖಾತೆ ಮತ ಚಾಲ್ತಿ ಖಾತೆಗಳ ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿವೆ.

ಗ್ರಾಹಕರು ಯೊನೊ ಅಪ್ಲಿಕೇಶನ್‌ನಲ್ಲಿರುವ ಡೋರ್​ಸ್ಟೆಪ್​ ಬ್ಯಾಂಕಿಂಗ್ ಟ್ಯಾಬ್ ಮೂಲಕ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಟೋಲ್ ಫ್ರೀ ಸಂಖ್ಯೆ 1800 111103ಗೆ ಕರೆ ಮಾಡಬಹುದು. ಡಿಎಸ್‌ಬಿ ಸೇವೆಗಳ ಅಡಿಯಲ್ಲಿ ದಿನಕ್ಕೆ ನಗದು ವಹಿವಾಟಿನ ಗರಿಷ್ಠ ಮಿತಿ ನಗದು ಠೇವಣಿ ಮತ್ತು ವಾಪಸಾತಿಗೆ 20,000 ರೂ., ಕನಿಷ್ಠ ಮಿತಿ 1,000 ರೂ. ಇರುತ್ತದೆ. ಹಣಕಾಸೇತರ ವಹಿವಾಟಿಗೆ ಪ್ರತಿ ಭೇಟಿಗೆ ಸೇವಾ ಶುಲ್ಕ 60 ರೂ. ಮತ್ತು ಹಣಕಾಸಿನ ವಹಿವಾಟಿಗೆ 100+ ಜಿಎಸ್​ಟಿ ಸೇರಿರುತ್ತದೆ.

ಆಯ್ದ ಶಾಖೆಗಳಲ್ಲಿ ಲಭ್ಯವಿರುವ ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಗಳು:

  • ನಗದು ಎತ್ತಿಕೊಳ್ಳುವಿಕೆ(ಪಿಕಪ್)
  • ನಗದು ಪಿಕಪ್
  • ಚೆಕ್​ ಎತ್ತಿಕೊಳ್ಳುವಿಕೆ
  • ವಿನಂತಿ ಪರಿಶೀಲಿಸಿ ಸ್ಲಿಪ್ ಪಿಕಪ್
  • ಫಾರ್ಮ್ 15 ಹೆಚ್ ಪಿಕಪ್
  • ಡಿಡಿ
  • ಟರ್ಮ್ ಠೇವಣಿ
  • ಲೈಫ್ ಸರ್ಟಿಫಿಕೇಟ್ ಪಿಕಪ್
  • ಕೆವೈಸಿ ದಾಖಲೆಗಳ ಪಿಕಪ್

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳಿಗೆ ಚಾಲನೆ ನೀಡಿದ್ದರು.

ABOUT THE AUTHOR

...view details