ಕರ್ನಾಟಕ

karnataka

ETV Bharat / business

ಸ್ಯಾಮ್​ಸಂಗ್​ ಮಿನಿ ಎಲ್ಇಡಿ ಟಿವಿಗಳಿಗೆ ಸುಧಾರಿತ ವೈಫೈ 6ಇ ತಂತ್ರಜ್ಞಾನ ಪ್ರಮಾಣೀಕರಣ!

ಈಗ ಸ್ಯಾಮ್‌ಸಂಗ್ ನಿಯೋ ಕ್ಯೂಎಲ್‌ಇಡಿ 8ಕೆ ಟಿವಿಗಳು ದೊಡ್ಡ ಬ್ಯಾಂಡ್‌ವಿಡ್ತ್ ಲೋಡ್‌ಗಳನ್ನು ಬೆಂಬಲಿಸಿವೆ. ವೇಗವಾಗಿ ಮಲ್ಟಿ-ಗಿಗಾಬಿಟ್ ಡೇಟಾ ಪ್ರಕ್ರಿಯೆಗೊಳಿಸಬಹುದು. ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಂಪರ್ಕ ಒದಗಿಸಲಿದೆ..

Samsung
Samsung

By

Published : Mar 30, 2021, 6:00 PM IST

ಸಿಯೋಲ್ :ಸ್ಯಾಮ್​ಸಂಗ್​ ತನ್ನ ಮಿನಿ ಎಲ್ಇಡಿ ಟಿವಿಗಳಿಗೆ ಸುಧಾರಿತ ವೈಫೈ ತಂತ್ರಜ್ಞಾನದ ಪ್ರಮಾಣೀಕರಣ ಪಡೆದಿದೆ ಎಂದು ಘೋಷಿಸಿದೆ. ಈ ಅತ್ಯಾಧುನಿಕ ಟೆಕ್​, ತನ್ನ ಹೊಸ ಉತ್ಪನ್ನಗಳಲ್ಲಿ ವೇಗವಾದ ಮತ್ತು ಸ್ಥಿರವಾದ ಸಂಪರ್ಕ ತಲುಪಿಸಲು ಅನುವು ಮಾಡಿಕೊಡುತ್ತದೆ.

ಸ್ಯಾಮ್​ಸಂಗ್

ಸ್ಯಾಮ್‌ಸಂಗ್ ತನ್ನ ಎರಡು ನಿಯೋ ಕ್ಯೂಎಲ್‌ಇಡಿ ಟಿವಿ ಮಾದರಿಗಳಾದ 'ಕ್ಯೂಎನ್ 900 ಎ' ಮತ್ತು 'ಕ್ಯೂಎನ್ 800ಎ' 800ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಜಾಗತಿಕ ಸಂಘಟನೆಯಾದ ವೈ-ಫೈ ಅಲೈಯನ್ಸ್​ನಿಂದ (ಡಬ್ಲ್ಯುಎಫ್‌ಎ) ವೈ-ಫೈ 6 ಇ (6ನೇ ಜನರೇಷನ್ ) ಪ್ರಮಾಣೀಕರಣ ಪಡೆದ ಉದ್ಯಮದ ಮೊದಲ ಟಿವಿಗಳು ಎಂದು ಹೇಳಿದೆ.

ಸ್ಯಾಮ್​ಸಂಗ್

ದಕ್ಷಿಣ ಕೊರಿಯಾದ ಟೆಕ್ ದೈತ್ಯ ವೈ-ಫೈ 6ಇ ತಂತ್ರಜ್ಞಾನವು ವೈ-ಫೈ 5ಗಿಂತ ನಾಲ್ಕು ಪಟ್ಟು ವೇಗವಾಗಿ ಸಂಪರ್ಕ ಕಲ್ಪಿಸುತ್ತದೆ. ಅನೇಕ ಟೊಲ್​ಗಳನ್ನು ಒಂದು ರೂಟರ್‌ಗೆ ಸಂಪರ್ಕಿಸಿದ್ದರೂ ಸ್ಥಿರ ಡೇಟಾ ವರ್ಗಾವಣೆ ಶಕ್ತಗೊಳಿಸುತ್ತದೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸ್ಯಾಮ್‌ಸಂಗ್‌
ಇದನ್ನೂ ಓದಿ: 'ಟಾಟಾದಿಂದ ಸೈರಸ್​ ವಜಾ ಸರಿ'- ಸುಪ್ರೀಂ ತೀರ್ಪು ಕುರಿತು ಮಿಸ್ತ್ರಿ ಹೇಳಿದ್ದು ಹೀಗೆ...

ಹೊಸದಾಗಿ ಪ್ರಮಾಣೀಕರಿಸಿದ ವೈ-ಫೈ 6ಇ ತಂತ್ರಜ್ಞಾನವು 6GHz ಆವರ್ತನವು ಈಗಿರುವ 2.4GHz ಮತ್ತು 5GHz ಫ್ರಿಕ್ವೆನ್ಸಿಗಳ ಜತೆ ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ.

ಈಗ ಸ್ಯಾಮ್‌ಸಂಗ್ ನಿಯೋ ಕ್ಯೂಎಲ್‌ಇಡಿ 8ಕೆ ಟಿವಿಗಳು ದೊಡ್ಡ ಬ್ಯಾಂಡ್‌ವಿಡ್ತ್ ಲೋಡ್‌ಗಳನ್ನು ಬೆಂಬಲಿಸಿವೆ. ವೇಗವಾಗಿ ಮಲ್ಟಿ-ಗಿಗಾಬಿಟ್ ಡೇಟಾ ಪ್ರಕ್ರಿಯೆಗೊಳಿಸಬಹುದು. ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಂಪರ್ಕ ಒದಗಿಸಲಿದೆ.

ಸ್ಯಾಮ್‌ಸಂಗ್‌

ವೈ-ಫೈ 6ಇ ತಂತ್ರಜ್ಞಾನದೊಂದಿಗೆ ತನ್ನ ನಿಯೋ ಕ್ಯೂಎಲ್‌ಇಡಿ ಟಿವಿಗಳು ಓವರ್-ದಿ-ಟಾಪ್ (ಒಟಿಟಿ), ವರ್ಚುವಲ್ ರಿಯಾಲಿಟಿ ಮತ್ತು ಗೇಮಿಂಗ್ ಸೇವೆಗಳೊಂದಿಗೆ ಉತ್ತಮ ವೀಕ್ಷಣೆ ಅನುಭವ ಬಯಸುವ ಗ್ರಾಹಕರಿಂದ ಮಾರಾಟ ಹೆಚ್ಚಳವಾಗಲಿದೆ ಎಂದು ಸ್ಯಾಮ್‌ಸಂಗ್ ವಿಶ್ವಾಸ ವ್ಯಕ್ತಪಡಿಸಿದೆ.

ABOUT THE AUTHOR

...view details