ಚೆನ್ನೈ: ತಯಾರಿಕಾ ಪ್ಲಾಂಟ್ನಲ್ಲಿ ಕೆಲಸ ಮಾಡುವ 40 ಉದ್ಯೋಗಿಗಳು ಕೋವಿಡ್- 19 ಸೋಂಕು ಧನಾತ್ಮಕ ವರದಿ ಬಂದ ಬಳಿಕ ಚೆನ್ನೈ ಸಮೀಪದ ಶ್ರೀಪೆರುಂಬುದೂರ್ ವಿಶೇಷ ಆರ್ಥಿಕ ವಲಯದಲ್ಲಿನ (ಎಸ್‌ಇಝ್ಯಡ್) ನೋಕಿಯಾ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಪರೀಕ್ಷಿಸಿದ 56 ಉದ್ಯೋಗಿಗಳಲ್ಲಿ 18 ಸೋಂಕಿತರು ಕಾಂಚೀಪುರಂ ಮತ್ತು 22 ಸೋಂಕಿತರು ನೆರೆಯ ಜಿಲ್ಲೆಗಳಾದ ತಿರುವಳ್ಳೂರು ಮತ್ತು ಚೆಂಗಲ್‌ಪಟ್ಟಿಗೆ ಸೇರಿದವರಾಗಿದ್ದಾರೆ. ಆ್ಯಪಲ್ನ ಪ್ರಮುಖ ಘಟಕ ಪೂರೈಕೆದಾರ ಸಾಲ್ಕಾಂಪ್ ಕಾರ್ಪೊರೇಷನ್ ಕಳೆದ ವರ್ಷ ನೋಕಿಯಾದಿಂದ ಸ್ಥಾವರವನ್ನು ವಹಿಸಿಕೊಂಡಿದೆ.
ಚೆನ್ನೈನ ಹೊರವಲಯದಲ್ಲಿರುವ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ನಂತರ ಮೇ 8ರಂದು ಈ ಘಟಕದಲ್ಲಿ ಪುನರಾರಂಭವಾಯಿತು. ಕಂಪನಿಗಳು 50 ಪ್ರತಿಶತದಷ್ಟು ಉದ್ಯೋಗಿಗಳೊಂದಿಗೆ ಕೆಲಸ ಮಾಡಲು ಸೂಚಿಸಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಕೆಲವು ಉದ್ಯೋಗಿಗಳು ವಿಫಲವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.