ಮುಂಬೈ:ಜೆಟ್ ಏರ್ವೇಸ್ ಸಂಸ್ಥೆಯ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಹಾಗೂ ಅವರ ಪತ್ನಿ ಅನಿತಾ ಗೋಯಲ್ ಅವರ ವಿದೇಶ ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರ ಅವಕಾಶ ನೀಡಲು ನಿರಾಕರಿಸಿದೆ.
ಜೆಟ್ ಸಂಕಟ:ನರೇಶ್ ಗೋಯಲ್, ಪತ್ನಿ ದುಬೈ ಪ್ರಯಾಣಕ್ಕೆ ತಡೆ - undefined
ಗೋಯಲ್ ದಂಪತಿ ದುಬೈಗೆ ಪ್ರಯಾಣಿಸಲು ಎಮಿರೇಟ್ಸ್ ವಿಮಾನ ಇಕೆ 507 ಏರಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಅವರನ್ನು ತಡೆದಿದೆ. ಅನಿತಾ ಗೋಯಲ್ ಹೆಸರಲ್ಲಿದ್ದ ಅವರ ವಸ್ತುಗಳಿದ್ದ ಬ್ಯಾಗನ್ನೂ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಗೋಯಲ್ ದಂಪತಿ ದುಬೈಗೆ ಪ್ರಯಾಣಿಸಲು ಎಮಿರೇಟ್ಸ್ ವಿಮಾನ ಇಕೆ 507 ಏರಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಪ್ರಾಧಿಕರ ಅವರನ್ನು ತಡೆದಿದೆ. ಅನಿತಾ ಗೋಯಲ್ ಹೆಸರಲ್ಲಿದ್ದ ಅವರ ವಸ್ತುಗಳಿದ್ದ ಬ್ಯಾಗನ್ನೂ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಜೆಟ್ ಏರ್ವೇಸ್ ಸಿಬ್ಬಂದಿ ಹಾಗೂ ಪೈಲೆಟ್ಗಳಿಗೆ ಹಲವು ತಿಂಗಳುಗಳಿಂದ ವೇತನ ನೀಡದಿರುವ ನರೇಶ್, ಇತರೆ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಹಿರಿಯ ಸದಸ್ಯರ ಪಾಸ್ಪೋರ್ಟ್ಗಳನ್ನು ಜಪ್ತಿ ಮಾಡಬೇಕು ಎಂದು ಜೆಟ್ ಏರ್ವೇಸ್ ಅಧಿಕಾರಿ ಹಾಗೂ ಸಿಬ್ಬಂದಿ ಸಂಘಟನೆಯ ಅಧ್ಯಕ್ಷರು ಮುಂಬೈ ಪೊಲೀಸ್ ಆಯುಕ್ತರಿಗೆ ಕಳೆದ ತಿಂಗಳು ಪತ್ರ ಬರೆದಿದ್ದರು.