ಕರ್ನಾಟಕ

karnataka

ETV Bharat / business

ಭಾರತ- ಚೀನಾ ಯುದ್ಧದಿಂದಾಗಿ ನಾನು ಪ್ರೀತಿಸಿದಾಕೆಯನ್ನ ಮದುವೆಯಾಗಲಿಲ್ಲ: ರತನ್ ಟಾಟಾ - ರತನ್​ ಟಾಟಾ

'ಲಾಸ್​ ಏಂಜಲೀಸ್​ನಲ್ಲಿ ಇದ್ದಾಗ ನಾನು ಒಬ್ಬಳನ್ನು ಪ್ರೀತಿಸುತ್ತಿದ್ದೆ. ಅವಳೂ ನನ್ನನ್ನು ಪ್ರೀತಿಸುತ್ತಿದ್ದಳು. ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ಭಾರತ- ಚೀನಾ ಯುದ್ಧ ಆರಂಭವಾಗಿ ನಮ್ಮ ಮದುವೆ ಮುರಿದು ಬಿತ್ತು' ಎಂದು ಹ್ಯೂಮನ್ಸ್ ಆಫ್ ಬಾಂಬೆ ಕಾರ್ಯಕ್ರಮದಲ್ಲಿ ತಮ್ಮ ಖಾಸಗಿ ಜೀವನದ ರಹಸ್ಯಗಳನ್ನು ರತನ್​ ಟಾಟಾ ಹಂಚಿಕೊಂಡ ಪರಿ ಹೀಗಿತ್ತು.

Ratan Tata
ರತನ್​ ಟಾಟಾ

By

Published : Feb 13, 2020, 5:12 PM IST

Updated : Feb 13, 2020, 5:45 PM IST

ಮುಂಬೈ: ಕಾಯಕವೇ ಕೈಲಾಸ ಎಂದು ತನ್ನ ಅಜ್ಜ ನೆಟ್ಟ ಉದ್ಯಮಕಾಗಿಯೇ ಜೀವನವನ್ನು ಮುಡಿಪಿಟ್ಟಿರುವ ಟಾಟಾ ಗ್ರೂಪ್​ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು, ಹ್ಯೂಮನ್ಸ್ ಆಫ್ ಬಾಂಬೆ ಕಾರ್ಯಕ್ರಮದಲ್ಲಿ ತಮ್ಮ ಖಾಸಗಿ ಜೀವನದ ಹಲವು ಮಜಲುಗಳನ್ನು ತೆರದಿಟ್ಟಿದ್ದಾರೆ.

ಓವರ್​ ಟು ಮಿಸ್ಟರ್​ ರತನ್​ ಟಾಟಾ...

'ಲಾಸ್​ ಏಂಜಲೀಸ್​ನಲ್ಲಿ ಇದ್ದಾಗ ನಾನು ಒಬ್ಬಳನ್ನು ಪ್ರೀತಿಸುತ್ತಿದ್ದೆ. ಅವಳೂ ನನ್ನನ್ನು ಪ್ರೀತಿಸುತ್ತಿದ್ದಳು. ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ಭಾರತ- ಚೀನಾ ಯುದ್ಧ ಆರಂಭವಾಗಿ ನಮ್ಮ ಮದುವೆ ಮುರಿದು ಬಿತ್ತು'.

ಅವರ ಅಜ್ಜಿ ಆರೋಗ್ಯ ಚೆನ್ನಾಗಿಲ್ಲದ ಕಾರಣ, ನನ್ನನ್ನು ಭಾರತದಲ್ಲಿ ಭೇಟಿ ಮಾಡಲು ಹಿಂತಿರುಗಿದರು. ಹಾಗಾಗಿ ನಾನು ಅವಳನ್ನು ಭೇಟಿ ಮಾಡಲು ಹಿಂತಿರುಗಿ ಬಂದಿದ್ದೆ. ನಾನು ಮದುವೆಯಾಗಲು ಬಯಸುವ ವ್ಯಕ್ತಿ ನನ್ನೊಂದಿಗೆ ಭಾರತಕ್ಕೆ ಬರುತ್ತಿದ್ದಾರೆ ಎಂದು ಭಾವಿಸಿದ್ದೆ. ಆದರೆ, 1962ರ ಇಂಡೋ-ಚೀನಾ ಯುದ್ಧದ ಕಾರಣದಿಂದಾಗಿ ಆಕೆಯ ಪೋಷಕರು ಮದುವೆ ಮಾಡದಿರಲು ನಿರ್ಧರಿಸಿದರು. ಇದರಿಂದ ನಮ್ಮ ಮದುವೆ ಮುರಿದು ಬಿತ್ತು.

ಅಜ್ಜಿಯೊಂದಿಗೆ ಯುವ ರತನ್ ಟಾಟಾ​

ಅಜ್ಜಿಯ ಬೋಧನೆಗಳನ್ನು ನೆನಪಿಸಿಕೊಂಡ ಟಾಟಾ, ಮಾತನಾಡುವ ಧೈರ್ಯ, ಮೃದುವಾದ ವ್ಯಕ್ತಿತ್ವ ಮತ್ತು ಘನತೆಯಿಂದ ಕಲಿಯುವ ಪಾಠವನ್ನು ಅವಳು ಹೇಳಿಕೊಟ್ಟಳು.

ನನ್ನ ತಾಯಿ ಮರುಮದುವೆಯಾದ ಕೂಡಲೇ ಶಾಲೆಯಲ್ಲಿರುವ ಹುಡುಗರು ನಮ್ಮ ಬಗ್ಗೆ ವಿಚಿತ್ರವಾಗಿ ನಿರಂತರವಾಗಿ ಮಾತನಾಡಲು ಶುರುಮಾಡಿದರು. ಕೆಲವೊಮ್ಮೆ ಅದು ಆಕ್ರಮಣಕಾರಿಯಾಗಿ ತೂರಿ ಬರುತ್ತಿತ್ತು. ಆದರೆ, ನಮ್ಮ ಅಜ್ಜಿ ಇಂತಹ ಸಂದರ್ಭದಲ್ಲಿ ಘನತೆಯನ್ನು ಉಳಿಸಿಕೊಳ್ಳುವಂತಹ ಪಾಠವನ್ನು ನಮಗೆ ಕಲಿಸಿದರು. ಈ ಮೌಲ್ಯವು ಇಂದಿನವರೆಗೂ ನನ್ನೊಂದಿಗೆ ಉಳಿದಿದೆ.

ನನಗೆ ಇನ್ನೂ ನೆನಪಿದೆ... ಎರಡನೇ ವಿಶ್ವಯುದ್ಧದ ನಂತರ ಅವಳು ನನ್ನ ಸಹೋದರನನ್ನು ಮತ್ತು ನನ್ನನ್ನು ಬೇಸಿಗೆ ರಜಾದಿನ ಕಳೆಯಲು ಲಂಡನ್‌ಗೆ ಕರೆದೊಯ್ದಳು. ಅಲ್ಲಿ ಅವಳು ಹೇಳಿಕೊಟ್ಟ ಮೌಲ್ಯಗಳು ನಿಜವಾಗಿಯೂ ನನ್ನ ಅಂತಃಕರಣ ತಾಕಿದವು. ಅವಳು ಹೇಳುತ್ತಿದ್ದ 'ಇದನ್ನು ಹೇಳಬೇಡ', 'ಅದರ ಬಗ್ಗೆ ಮೌನವಾಗಿರಿ', 'ಘನತೆಯೇ ಎಲ್ಲಕ್ಕಿಂತ ಮಿಗಿಲಾದದ್ದು' ಎಂಬ ಮಾತುಗಳು ನಮ್ಮ ಮನಸ್ಸಿನಲ್ಲಿ ಹುದುಗಿವೆ ಎಂದು ಹೇಳುತ್ತಾ ಟಾಟಾ ನಸುನಗುತ್ತಾರೆ.

ಯುವ ರತನ್​ ಟಾಟಾ
Last Updated : Feb 13, 2020, 5:45 PM IST

ABOUT THE AUTHOR

...view details