ಕರ್ನಾಟಕ

karnataka

ETV Bharat / business

ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಹೂಡಿಕೆ, ಸಿಬ್ಬಂದಿ ಪ್ರಮಾಣ ದ್ವಿಗುಣಗೊಳಿಸಿದ ಮಾಡರ್ನಾ

ಮಾಡರ್ನಾ ಮೊದಲ ಉತ್ಪನ್ನವಾದ ಲಸಿಕೆಯನ್ನು ಅಮೆರಿಕ ಮತ್ತು ಕೆನಡಾದಲ್ಲಿ ಬಳಕೆ ಮಾಡಲು ಅನುಮೋದನೆ ನೀಡಲಾಗಿದೆ. ಯುರೋಪಿನಲ್ಲಿ ಬಳಸಲು ಕಂಪನಿಯ ಅರ್ಜಿಯನ್ನು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಕೆಲವೇ ದಿನಗಳಲ್ಲಿ ಹಸಿರು ನಿಶಾನೆ ನೀಡಬಹುದು.

Moderna
ಮಾಡರ್ನಾ

By

Published : Jan 5, 2021, 2:06 PM IST

ನ್ಯೂಯಾರ್ಕ್: ಮಾಡರ್ನಾ ಇಂಡಸ್ಟ್ರೀಸ್ ಲಿಮಿಟೆಡ್, ಎರಡು ವ್ಯಾಕ್ಸಿನ್ ಶಾಟ್ಸ್ ತಯಾರಿಸಲು ತನ್ನ ಹೂಡಿಕೆ ಮತ್ತು ಸಿಬ್ಬಂದಿ ಸೇರ್ಪಡೆಯನ್ನು ಹೆಚ್ಚಿಸಿದೆ. ಉತ್ಪಾದನೆಯನ್ನು 100 ಮಿಲಿಯನ್ ಪ್ರಮಾಣದಲ್ಲಿ ಏರಿಕೆ ಮಾಡಿದೆ ಎಂದು ಬಯೋಟೆಕ್ ಕಂಪನಿಯಾದ ಮ್ಯಾಸಚೂಸೆಟ್ಸ್‌ನ ಕೇಂಬ್ರಿಡ್ಜ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಲಭ್ಯವಿರುವ ಲಸಿಕೆಯ ಪ್ರಮಾಣವನ್ನು ಹೆಚ್ಚಿಸಲು ಅಮೆರಿಕ ಮಾಡರ್ನಾ ಡೋಸೇಜ್ ಮಟ್ಟವನ್ನು 18 ರಿಂದ 55ರವರೆಗೆ ಅರ್ಧದಷ್ಟು ಕಡಿತಗೊಳಿಸಲು ಯೋಚಿಸುತ್ತಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂಬುದನ್ನು ಸಹ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಸಿಬಿಎಸ್‌ನ 'ಫೇಸ್ ದಿ ನೇಷನ್'ನಲ್ಲಿ ಮಾತನಾಡಿದ ಆಪರೇಷನ್ ವಾರ್ಪ್ ಸ್ಪೀಡ್‌ನ ಮುಖ್ಯ ವೈಜ್ಞಾನಿಕ ಸಲಹೆಗಾರ ಮೊನ್ಸೆಫ್ ಸ್ಲೌಯಿ, ಅರ್ಧ ಡೋಸ್ ಪೂರ್ಣ ಪ್ರಮಾಣದ ರಕ್ಷಣೆಯ ಒದಗಿಸುತ್ತದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಹೇಳಿದರು.

ಮಾಡರ್ನಾ ವಕ್ತಾರರು ಈ ಬಗ್ಗೆ ಯಾವುದೇ ನಿಯಂತ್ರಕ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ನ್ಯೂಯಾರ್ಕ್​ನಲ್ಲಿ. ಕಂಪನಿಯ ಷೇರುಗಳು ಮಧ್ಯಾಹ್ನ 1:42ರ ವೇಳೆಗೆ ಶೇ 6.1ರಷ್ಟು ಏರಿಕೆಯಾಗಿ 110.84 ಡಾಲರ್​ಗೆ ತಲುಪಿವೆ.

ಇದನ್ನೂ ಓದಿ: ಭಾರತದಲ್ಲಿ ಆಡಿ A4 ಹೊಸ ಆವೃತ್ತಿ ಕಾರು ಬಿಡುಗಡೆ : 7.3 ಸೆಕೆಂಡಿಗೆ 0-100 km ಸ್ಪೀಡ್​, ಬೆಲೆ ಎಷ್ಟು ಗೊತ್ತೇ?

ಮಾಡರ್ನಾ ಮೊದಲ ಉತ್ಪನ್ನವಾದ ಲಸಿಕೆಯನ್ನು ಅಮೆರಿಕ ಮತ್ತು ಕೆನಡಾದಲ್ಲಿ ಬಳಕೆ ಮಾಡಲು ಅನುಮೋದನೆ ನೀಡಲಾಗಿದೆ. ಯುರೋಪಿನಲ್ಲಿ ಬಳಸಲು ಕಂಪನಿಯ ಅರ್ಜಿಯನ್ನು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಕೆಲವೇ ದಿನಗಳಲ್ಲಿ ಹಸಿರು ನಿಶಾನೆ ನೀಡಬಹುದು.

ಅಮೆರಿಕದಲ್ಲಿ ಮಾಡರ್ನಾ ಈವರೆಗೆ 18 ಮಿಲಿಯನ್ ಡೋಸ್​ಗಳನ್ನು ಸರ್ಕಾರಕ್ಕೆ ಪೂರೈಸಿದೆ. ಕಳೆದ ವರ್ಷ ಸರಿಸುಮಾರು 20 ಮಿಲಿಯನ್ ಡೋಸ್​​ ತಲುಪಿಸುವ ಗುರಿ ಇರಿಸಿಕೊಂಡಿತ್ತು.

ಅಮೆರಿಕ 200 ಮಿಲಿಯನ್ ಡೋಸ್ ಲಸಿಕೆಗೆ ಆರ್ಡರ್ ಮಾಡಿದೆ. 300 ಮಿಲಿಯನ್​ಗೂ ಅಧಿಕ ಪ್ರಮಾಣದಲ್ಲಿ ಖರೀದಿಸುವ ಆಯ್ಕೆ ಇರಿಸಿಕೊಂಡಿದೆ. ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ 200 ಮಿಲಿಯನ್ ಡೋಸ್‌ ತಲುಪಿಸುವ ನಿರೀಕ್ಷೆಯಿದೆ ಎಂದು ಮಾಡರ್ನಾ ಹೇಳಿದೆ.

ABOUT THE AUTHOR

...view details