ಕರ್ನಾಟಕ

karnataka

ETV Bharat / business

ಕಿರಣ್ ಮಜುಂದಾರ್ ಶಾಗೆ ಆಸ್ಟ್ರೇಲಿಯಾದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ - ಕಿರಣ್ ಮಜುಂದಾರ್ ಶಾಗೆ ಆಸ್ಟ್ರೇಲಿಯಾದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ

ಆಸ್ಟ್ರೇಲಿಯಾದ ಭಾರತದ ಹೈಕಮೀಷನರ್ ಹರಿಂದರ್ ಸಿಧು ಅವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಸಾಮಾನ್ಯ ವಿಭಾಗದಲ್ಲಿ 'ಆರ್ಡರ್ ಆಫ್ ಆಸ್ಟ್ರೇಲಿಯಾ' ಗೌರವ ಸದಸ್ಯರಾಗಿ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರಿಗೆ ಪ್ರಶಸ್ತಿ ನೀಡಲಿದ್ದಾರೆ. ಉಭಯ ರಾಷ್ಟ್ರಗಳ ನಡುವಣ ಶಿಕ್ಷಣ, ವ್ಯವಹಾರ, ಇತರೆ ಕ್ಷೇತ್ರಗಳಲ್ಲಿ ಕಿರಣ್ ಅವರ ಸೇವೆ ಅನನ್ಯವಾದದ್ದು. ಈ ಸೇವೆಗಾಗಿ ಅತ್ಯುನ್ನತ್ತ ಗೌರವ ಅರಸಿ ಬಂದಿದೆ ಎಂದು ಹೇಳಿದ್ದಾರೆ.

Kiran Mazumdar-Shaw
ಕಿರಣ್ ಮಜುಂದಾರ್ ಶಾ

By

Published : Jan 18, 2020, 7:40 PM IST

ನವದೆಹಲಿ:ಭಾರತದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸಿದ ಉದ್ಯಮಿ/ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಸೇವೆ ಮನ್ನಿಸಿ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಆಸ್ಟ್ರೇಲಿಯಾ' ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ಘೋಷಿಸಿದೆ.

ಆಸ್ಟ್ರೇಲಿಯಾದ ಭಾರತದ ಹೈಕಮಿಷನರ್ ಹರಿಂದರ್ ಸಿಧು ಅವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಸಾಮಾನ್ಯ ವಿಭಾಗದಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ ಸದಸ್ಯರಾಗಿ ಶಾ ಅವರಿಗೆ ಪ್ರಶಸ್ತಿ ನೀಡಲಿದ್ದಾರೆ. ಉಭಯ ರಾಷ್ಟ್ರಗಳ ನಡುವಣ ಶಿಕ್ಷಣ, ವ್ಯವಹಾರ, ಇತರೆ ಕ್ಷೇತ್ರಗಳಲ್ಲಿ ಕಿರಣ್ ಅವರ ಸೇವೆ ಅನನ್ಯವಾದದ್ದು. ಈ ಸೇವೆಗಾಗಿ ಅತ್ಯುನ್ನತ ಗೌರವ ಅರಸಿ ಬಂದಿದೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಯೂ ಆಗಿರುವ ಕಿರಣ್ ಮಜುಂದಾರ್ ಶಾ, ಭಾರತದಲ್ಲಿ ಅತಿದೊಡ್ಡ ಜೈವಿಕ ಔಷಧಿ ಕಂಪನಿಯಾದ ಬಯೋಕಾನ್ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದಾರೆ.

ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದವರಲ್ಲಿ ಶಾ 4ನೇ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ (2012), ಮಾಡಿ ಎ.ಜಿ. ಸೋಲಿ ಜೆಹಂಗೀರ್ ಸೊರಬ್ಜಿ (2006) ಮತ್ತು ಮದರ್ ಥೆರೇಸಾ (1982) ಅವರು ಪಡೆದಿದ್ದರು.

ABOUT THE AUTHOR

...view details