ಬೆಂಗಳೂರು:ದೇಶದ ವಿಶ್ಲೇಷಣಾ ಸಂಸ್ಥೆ ಕ್ರಿಸಿಲ್ ಬಿಡುಗಡೆ ಮಾಡಿರುವ ಇಎಸ್‌ಜಿ ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ಇನ್ಫೋಸಿಸ್ ಅಗ್ರಸ್ಥಾನ ಪಡೆದಿದೆ ಎಂದು ಇನ್ಫೋಸಿಸ್ ಸಂಸ್ಥೆ ತಿಳಿಸಿದೆ. ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ಇತರೆ ಎಲ್ಲಾ ಕಂಪನಿಗಳನ್ನು ಹಿಂದಿಕ್ಕಿ ಇನ್ಫೋಸಿಸ್ ಈ ಸ್ಥಾನಮಾನ ಗಳಿಸಿದೆ.
ದೇಶದ 18 ವಲಯಗಳ 225 ಕಂಪನಿಗಳ ಇಎಸ್‌ಜಿ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡಲಾಗಿದೆ. ಇನ್ಫೋಸಿಸ್ 100ಕ್ಕೆ 79 ಅಂಕಗಳನ್ನು ಪಡೆದಿದೆ. ಇಎಸ್‌ಜಿ ಅನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ.
ಪರಿಸರದ ಮೌಲ್ಯಮಾಪನದಲ್ಲಿ 86, ಸಾಮಾಜಿಕ ಮತ್ತು ಆಡಳಿತದ ಪ್ಯಾರಾಮೀಟರ್‌ನಲ್ಲಿ ಕ್ರಮವಾಗಿ 68 ಮತ್ತು 81 ಅಂಕಗಳನ್ನು ಇನ್ಫೋಸಿಸ್‌ಗಳಿಸಿದೆ. 2020ರ ಹಣಕಾಸು ವರ್ಷ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿನ ಇಎಸ್‌ಜಿಯನ ಗುಣಾತ್ಮಕ ಮತ್ತು ಪರಿಣಾತ್ಮಕ ಅಂಶಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದೆ.
ಕಂಪನಿಗಳನ್ನು ಮೌಲ್ಯಮಾಪನದ ಮಾನದಂಡ