ನವದೆಹಲಿ: ಎಲ್ಐಸಿ ಮಾಲೀಕತ್ವದ ಐಡಿಬಿಐ ಬ್ಯಾಂಕ್ 2017ರಿಂದ ಸಕಾಲಿಕವಾಗಿ ಸರಿಪಡಿಸುವ ಕ್ರಮಗಳಿಗೆ (ಪಿಸಿಎ) ಒಳಪಟ್ಟು ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸುತ್ತಿದೆ.
ಕಠಿಣ ಆರ್ಥಿಕ ನಿರ್ಬಂಧ ತೆರವಿಗಾಗಿ ಆರ್ಬಿಐ ಜತೆ ಐಡಿಬಿಐ ಚರ್ಚೆ - ಆರ್ಬಿಐ
ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಆಡಳಿತ ಮಂಡಳಿಯು ಇದೇ ವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಜತೆಗೆ ಸಕಾಲಿಕವಾಗಿ ಸರಿಪಡಿಸುವ ಕ್ರಮಗಳ ಕುರಿತು ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಐಡಿಬಿಐ
ಐಡಿಬಿಐ ಆಡಳಿತ ಮಂಡಳಿಯು ಇದೇ ವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಜತೆಗೆ ಸಕಾಲಿಕ ಸರಿಪಡಿಸುವ ಕ್ರಮಗಳ ಕುರಿತು ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಗರಿಷ್ಠ ಪ್ರಮಾಣದ ವಸೂಲಾಗದ ಸಾಲ, ಕಡಿಮೆ ಮಟ್ಟದ ಬಂಡವಾಳ, ಮಂಜೂರಾದ ಸಾಲಗಳಿಂದ ಕಡಿಮೆ ಪ್ರಮಾಣದ ಲಾಭ ಪಡೆಯುವ ಮಾನದಂಡಗಳು ಅನ್ವಯ ಬ್ಯಾಂಕ್ಗಳ ಹಣಕಾಸು ಪರಿಸ್ಥಿತಿ ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾನದಂಡಗಳು ಬ್ಯಾಂಕ್ಗಳ ಹಣಕಾಸು ಪರಿಸ್ಥಿತಿ ಕಳಪೆಯಾಗಿರುವುದು ಸೂಚಿಸುತ್ತವೆ. 2017ರ ಮೇ ತಿಂಗಳಲ್ಲಿ ಐಡಿಬಿಐ ಅನ್ನು ಪಿಸಿಎಗೆ ಒಳಪಡಿಸಲಾಯಿತು.